ಹೃದಯಾಘಾತದಿಂದ ನಿಧನರಾದ ಆಹಾರ ಸಚಿವ ಉಮೇಶ್ ಕತ್ತಿ ನಡೆದು ಬಂದ ಹಾದಿ.

ಬೆಂಗಳೂರು,ಸೆಪ್ಟಂಬರ್,7,2022(www.justkannada.in):  ಆಹಾರ ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನರಾಗಿದ್ದು,  ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಲಿದೆ.

ಬೆಂಗಳೂರಿನ ಡಾಲರ್ಸ್ ಕಾಲೊನಿಯ ತಮ್ಮ‌ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಮಂಗಳವಾರ ರಾತ್ರಿ ಹತ್ತು ಗಂಟೆಗೆ ಸಚಿವ ಉಮೇಶ್ ಕತ್ತಿ ಅವರಿಗೆ ಹೃದಯಾಘಾತ ಉಂಟಾಗಿದೆ. ಹೃದಯ ನೋವಿನಿಂದ ಕುಸಿದು ಬಿದ್ದ ಉಮೇಶ್ ಕತ್ತಿ ಅವರನ್ನು  ಎಮ್. ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.

ಬಿ.ಎಸ್. ಯಡಿಯೂರಪ್ಪ, ಬವಸರಾಜ್  ಬೊಮ್ಮಾಯಿ ಸರ್ಕಾರದಲ್ಲಿ ಆಹಾರ ಖಾತೆ,‌ಸೇರಿದಂತೆ ತೋಟಗಾರಿಕೆ ಮತ್ತು ಈಗ ಅರಣ್ಯ ಖಾತೆ ಸಚಿವರಾಗಿದ್ದರು. ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯ ಬಂದಾಗ ಯಾವುದೇ ಮುಲಾಜಿಲ್ಲದೆ ಧ್ವನಿ ಎತ್ತುತ್ತಿದ್ದ ಕತ್ತಿ ಅವರು, ಪ್ರತ್ಯೇಕ ಉತ್ತರ ಕರ್ನಾಟಕ ಬಗ್ಗೆ ಹಲವು ಬಾರಿ ಪ್ರಸ್ತಾಪ ಮಾಡಿದ್ದರು.

ಕತ್ತಿ ಅವರ ಪರಿಚಯ.

9 ಸಲ ಚುನಾವಣೆ ಎದುರಿಸಿ 8 ಬಾರಿ ಗೆದ್ದಿರುವ ಉಮೇಶ್ ಕತ್ತಿ ನಾಲ್ಕನೇ ಬಾರಿಗೆ ಸಚಿವರಾಗಿದ್ದಾರೆ. 1985ರಲ್ಲಿ ರಾಜಕೀಯಕ್ಕೆ ಬಂದ ಉಮೇಶ್ ಕತ್ತಿ, ವಿಭಿನ್ನ  ಪಕ್ಷಗಳ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಬೆಳಗಾವಿಯ ಕೆಎಲ್‌ ಇ ಸೊಸೈಟಿಯ ಲಿಂಗರಾಜ್ ಕಾಲೇಜಿನಲ್ಲಿ ಪಿಯುಸಿ ತನಕ ವ್ಯಾಸಂಗ ಮಾಡಿರುವ ಹುಕ್ಕೇರಿ ಕ್ಷೇತ್ರದಿಂದ 1985ರಲ್ಲಿ ಮೊದಲ ಬಾರಿಗೆ ಜನತಾ ಪಕ್ಷದಿಂದ ಚುನಾವಣಾ ಕಣಕ್ಕಿಳಿದು,  ಮೊದಲ ಪ್ರಯತ್ನದಲ್ಲೇ ಗೆಲುವು ಕಂಡರು. 1989ರಲ್ಲಿ ಜನತಾದಳಕ್ಕೆ ಬಂದು ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದರು. 1994ರಲ್ಲಿಯೂ ಗೆದ್ದು ಹ್ಯಾಟ್ರಿಕ್ ಗೆಲವು ಸಾಧಿಸಿದರು. 1999ರಲ್ಲಿ ಸಂಯುಕ್ತ ಜನತಾದಳ (ಜೆಡಿಯು)ನಿಂದ ಸ್ಪರ್ಧಿಸಿ 4ನೇ ಬಾರಿಯೂ ಗೆದ್ದರು. 2004ರಲ್ಲಿ ಕಾಂಗ್ರೆಸ್‌ ಗೆ ಪಕ್ಷದ ಮೂಲಕ ಸ್ಪರ್ಧಿಸಿದ  ಉಮೇಶ್ ಕತ್ತಿ  ಸೋಲು ಅನುಭವಿಸಿದರು. ನಂತರ 2008ರಲ್ಲಿ ಜೆಡಿಎಸ್ ಸೇರಿ ಗೆಲುವು ಕಂಡರು.

ನಂತರ ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 6ನೇ ಗೆಲುವು ಸಾಧಿಸಿದರು. 2013, 2018ರ ಚುನಾವಣೆಯಲ್ಲಿಯೂ ಹುಕ್ಕೇರಿ ಕ್ಷೇತ್ರದಿಂದ ಕಣಕ್ಕಿಳಿದು ಗೆಲುವು ಸಾಧಿಸಿದರು.

ಶಾಸಕರಾಗಿದ್ದ ತಂದೆ ವಿಶ್ವನಾಥ್ ಕತ್ತಿ ನಿಧನದಿಂದಾಗಿ ರಾಜಕೀಯಕ್ಕೆ ಬಂದ ಉಮೇಶ್ ಕತ್ತಿ 1996ರಲ್ಲಿ ಮೊದಲ ಬಾರಿಗೆ ಸಕ್ಕರೆ ಖಾತೆ ಸಚಿವರಾದರು. 2008ರಲ್ಲಿ ತೋಟಗಾರಿಕೆ ಮತ್ತು ಬಂಧಿಖಾನೆ ಸಚಿವರಾದರು. 2010ರಲ್ಲಿ ಕೃಷಿ ಸಚಿವರಾದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಕೀರ್ತಿ ಉಮೇಶ್ ಕತ್ತಿ ಅವರದ್ದು. 2019ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಸೇರಿದರು, ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ವಹಿಸಿಕೊಂಡರು.

2021ರಲ್ಲಿಯೂ ಬಸವರಾಜ ಬೊಮ್ಮಾಯಿ ಸಂಪುಟ ಸೇರಿದರು. ಅರಣ್ಯ ಇಲಾಖೆ ಖಾತೆ ಸಚಿವರಾಗಿದ್ದಾರೆ. ಸಹೋದರ ರಮೇಶ್ ಕತ್ತಿ ಸಹ ರಾಜಕೀಯದಲ್ಲಿದ್ದು, ಮಾಜಿ ಸಂಸದರಾಗಿದ್ದರು.

ಸಂತಾಪ

ಸಚಿವ ಉಮೇಶ ಕತ್ತಿ‌ಅವರ ನಿಧನಕ್ಕೆ ಮಾಜಿ ಉಪ.ಮುಖ್ಯಮಂತ್ರಿ ಲಕ್ಷ್ಮಣ ಸವದಿ. ಡಾ.ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ಬಾಲಚಂದ್ರ ಜಾರಕಿಹೊಳಿ, ಅಭಯ ಪಾಟೀಲ, ರಮೇಶ ಹಾರಕಿಹೊಳಿ ಸೇರಿದಂತೆ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.

Key words: Food Minister- Umesh Katti-died -heart attack

ENGLISH SUMMARY…

The political journey of Food Minister Umesh Katti who expired due to a heart attack
Bengaluru, September 7, 2022 (www.justkannada.in): Food and Civil Supplies Minister Umesh Katti died today due to a massive heart attack. The last rites of the deceased will be held today at his native village Belladabagewadi, in Hukkeri Taluk, Belagavi District.
He suffered the attack at his house located in Dollars Colony in Bengaluru, on Tuesday night around 10.00 pm. He was immediately taken to the M.S. Ramaiah Hospital, but didn’t respond to the treatment and breathed his last. He was 61 years old.
He has served as the Minister of Food and Horticulture under B.S. Yediyurappa and Basavaraja Bommai’s government. Presently he was the Forest Minister. He was known for raising his voice when it comes to the issues of development of North Karnataka. He also had earned flak from several persons for proposing separate state status for North Karnataka.
Brief Introduction
Umesh Katti faced elections nine times, and won eight times and became Minister four times. He entered politics in 1985 and contested from several parties.
Till PUC he pursued his education at the KLE Society Lingaraj College in Belagavi. He got elected from the Hukkeri Assembly Constituency for the first time in 1985 from the Janata Party and tasted success in the very first attempt. He joined the Janata Dal in 1989 and won. He registered Hatrick victories by winning again in 1994. In 1999 he contested from Janata Dal (JDU) and won for the fourth time. In 2004 he contested from the Congress party ticket and lost the election. He joined the JDS again in 2008 and won.
Later he joined the BJP. He contested on a BJP ticket during the byelection and won for the 6th time. He went on to win from the Hukkeri constituency in 2013 and 2018.
Several leaders, including Chief Minister Basavaraj Bommai, former Deputy Chief Minister Lakshman Savadi, Dr. Prabhakar Kore, Mahanesh Kavatagimath, Balachandra Jarkiholi, Abhaya Patil, Ramesh Jarkiholi and others have condoled the untimely demise of Minister Umesh Katti.
Keywords: Forest Minister/ Umesh Katti/ dies/ heart attack