ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ: ಇವರಿಗೆ ಜನರ ಹಿತಕ್ಕಿಂತ ಅಧಿಕಾರದ ವ್ಯಾಮೋಹ ಹೆಚ್ಚು- ಮಾಜಿ ಸಂಸದ ವಿ ಎಸ್ ಉಗ್ರಪ್ಪ ಟೀಕೆ

Promotion

ಮೈಸೂರು,ಆಗಸ್ಟ್,3,2021(www.justkannada.in):  ರಾಜ್ಯದ 11 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಸರ್ಕಾರ ಜೀವಂತವಾಗಿಲ್ಲ. ರಾಜ್ಯದ ಬಹುತೇಕ ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನರು ಸಂಕಷ್ಟ ಪಡುತ್ತಿದ್ದಾರೆ. ಆದರೂ ಬಹುತೇಕ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಇರದೇ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಜನರ ಹಿತಕ್ಕಿಂತ ಅಧಿಕಾರದ ವ್ಯಾಮೋಹ ಇವರಿಗೆ ಹೆಚ್ಚು. ಜನರ ನೆರವಿಗೆ ಮುಂದಾಗದ ಶಾಸಕರು, ಸಚಿವ ಸ್ಥಾನ ಪಡೆಯಲು ಲಾಬಿ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಂಸದ ವಿಎಸ್ ಉಗ್ರಪ್ಪ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಂಸದ ವಿಎಸ್ ಉಗ್ರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಸ್ಥಾನ ಅಲಂಕರಿಸಲಿರುವವರಿಗೆ ಶುಭ ಹಾರೈಸಿದರು.  ಮುಖ್ಯಮಂತ್ರಿ ಹುದ್ದೆ, ಸಚಿವ ಸ್ಥಾನ ಸೇರಿದಂತೆ ಅಧಿಕಾರ ಸುಖದ ಸುಪ್ಪತ್ತಿಗೆಯಲ್ಲ. ಇದು ಗುರುತರ ಜವಾಬ್ದಾರಿ. ಬಸವರಾಜ ಬೊಮ್ಮಾಯಿ ಬಿಜೆಪಿ ವಿಚಾರದಧಾರೆ ಹಿನ್ನೆಲೆಯಲ್ಲಿ ಸಿಎಂ ಆಗಿದ್ದಾರೆ. ನೀವು ಮೊದಲು ಜನರ ‌ಬದುಕಿಗೆ ಆಧ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ರಾಜ್ಯಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲ ತಾಯಿ ಧೋರಣೆ ಅನುಸರಿಸುತ್ತಿದೆ. ಗುಜರಾತ್ ನಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿಯವರು ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಸ್ಪಂದಿಸುತ್ತಿಲ್ಲ. ಕಳೆದ 2009ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರ ಮನವೊಲಿಸಿ ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಹೆಚ್ಚಿನ ನೆರವು ಕೊಡಿಸಿದ್ದರು. ಆದರೀಗ ರಾಜ್ಯದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಕೋವಿಡ್ 3 ನೇ ಅಲೆ ಪೂರ್ವ ಸಿದ್ದತೆ ಮಾಡಿಕೊಂಡಂತೆ ಕಾಣುತ್ತಿಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ವಿಶ್ವನಾಥ್ ಹಾಗೂ ಯತ್ನಾಳ್ ಅವರೇ ನಿಮ್ಮದು ಏನ್ ಉತ್ತರನ ಪೌರುಷವೇ..?

ಕಳೆದ ಒಂದು ವಾರದಿಂದ ಹೆಚ್. ವಿಶ್ವನಾಥ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಮೌನಿ ಬಾಬಾಗಳಾಗಿದ್ದಾರೆ. ರಾಜ್ಯ ಸರ್ಕಾರದ ಕಿಕ್ ಬ್ಯಾಕ್ ಆರೋಪ ಮಾಡಿದ್ರಿ‌. ಯಡಿಯೂರಪ್ಪ ಮತ್ತು ಕುಟುಂಬ ನೂರಾರು ಕೋಟಿ ಕಿಕ್ ಬ್ಯಾಕ್ ಆರೋಪ ಇದೆ. ಇದನ್ನ ಒಬ್ಬ ನಿವೃತ್ತಿ ಅಧಿಕಾರಿ ಸಾರ್ವಜನಿಕವಾಗಿ ಗಂಭೀರ ಆರೋಪ ಮಾಡಿದ್ದಾರೆ. ಈಗಿದ್ರೂ ದೇಶದ ಸಿಬಿಐ, ಇಡಿ, ಐಡಿ, ಪೊಲೀಸ್ ಇಲಾಖೆ ಏನು ಮಾಡ್ತಿದೆ. ವಿಶ್ವನಾಥ್ ಹಾಗೂ ಯತ್ನಾಳ್ ಅವರೇ ನಿಮ್ಮದು ಏನ್ ಉತ್ತರನ ಪೌರುಷವೇ..? ಎಂದು ವಿ.ಎಸ್ ಉಗ್ರಪ್ಪ ಲೇವಡಿ ಮಾಡಿದರು.

ಹಾಗೆಯೇ ಪ್ರಧಾನಿ ಮೋದಿ ವಿರುದ್ಧವೂ ಕಿಡಿಕಾರಿದ ವಿ.ಎಸ್ ಉಗ್ರಪ್ಪ, ನಾ ಕಾವುಂಗಾ ನಾ ಖಾನೆದುಂಗ ಎಂದು ಹೇಳುತ್ತಿರಲ್ಲ ಮಿಸ್ಟರ್ ಮೋದಿ. ಏನಿದು.?  ಇದಕ್ಕೆ ಉತ್ತರ ಯಾವಾಗ ಕೊಡ್ತಿರಿ. ಭ್ರಷ್ಟಚಾರ ಮುಕ್ತ ದೇಶ ಎಲ್ಲಿಗೆ ಹೋಗಿದೆ. ಯಡಿಯೂರಪ್ಪ ಹಾಗೂ ಕುಟುಂಬ ಭ್ರಷ್ಟಾಚಾರದ ವಿರುದ್ದ ಸಂಪೂರ್ಣ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಸಚಿವ ಸಂಪುಟ ರಚನೆ ವಿಚಾರಕ್ಕೆ ಸಂಬಂದಿಸಿದಂತೆ ಪ್ರತಿಕ್ರಿಯಿಸಿದ ವಿ.ಎಸ್ ಉಗ್ರಪ್ಪ,  ಕಾಂಗ್ರೆಸ್ ನದು ಲಕೋಟೆ ಸಂಸ್ಕೃತಿ‌ ಎಂದು ಟೀಕಿಸುತ್ತಿದ್ದ ಬಿಜೆಪಿ ಇದೀಗ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಮಾಡುತ್ತಿರುವುದಾದರು ಏನು? ಸಚಿವ ಸಂಪುಟ ವಿಸ್ತರಣೆ ವೇಳೆ ಮುಖ್ಯಮಂತ್ರಿಗೆ ಸ್ವಾತಂತ್ರ್ಯ ನೀಡದೇ, ಹೈಕಮಾಂಡ್ ಸೂಚಿಸುವವರಿಗೆ ಸ್ಥಾನ ಕಲ್ಪಿಸುವ ಪ್ರಯತ್ನಗಳಾಗಿವೆ. ಸಚಿವ ಸಂಪುಟ ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ. ಈ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ, ದೇಶದ ಸಂವಿಧಾನಕ್ಕೆ, ರಾಜ್ಯದ ಆರೂವರೆ ಕೋಟಿ ಜನರಿಗೆ ಮಾಡಿದ ಅನ್ಯಾಯವಾಗಿದೆ ಎಂದು ಹರಿಹಾಯ್ದರು.

ಯಡಿಯೂರಪ್ಪ ಕಣ್ಣೀರು ಹಾಕಿ ಪದತ್ಯಾಗ ಮಾಡಿದ್ದರ ವಿಚಾರ. ಹೋರಾಟಗಾರ ಯಾವತ್ತು ಕಣ್ಣೀರು ಹಾಕೋದಿಲ್ಲ. ಶರಣಾಗಿರೋದಕ್ಕೆ ಯಡಿಯೂರಪ್ಪ ಕಣ್ಣೀರು ಹಾಕಿದ್ದಾರೆ. ಯಡಿಯೂರಪ್ಪ ಕಣ್ಣೀರಲ್ಲಿ ಎಲ್ಲಾ ಉತ್ತರ ಇದೆ ಎಂದು ಲೇವಡಿ ಮಾಡಿದರು.

ಬೊಮ್ಮಾಯಿ ಸರ್ಕಾರ ಬೀಳಲು ಬಿಡಲ್ಲ ಎಂಬ ಹೆಚ್.ಡಿ.ದೇವೆಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ವಿಎಸ್ ಉಗ್ರಪ್ಪ, ಎಸ್.ಆರ್.ಬೊಮ್ಮಾಯಿ ಸರ್ಕಾರ ಬೀಳೋಕೆ ಕಾರಣ ಯಾರು ಅನ್ನೋದನ್ನ ಮೊದಲು ಹೇಳಲಿ‌. ಜೆಡಿಎಸ್‌ಗೆ ಅಸ್ಥಿರತೆಯಿಂದ ಬಿಜೆಪಿ ಪರ ಹೇಳಿಕೆ ಕೊಡುತ್ತಿದೆಯೋ. ಇಲ್ಲವೇ ಅನಿವಾರ್ಯವಾಗಿ ಬಿಜೆಪಿ ಪರ‌ ಹೇಳಿಕೆ ಕೊಡುತ್ತಿದೆಯೋ ಗೊತ್ತಿಲ್ಲ ಎಂದು ಜೆಡಿಎಸ್‌ ವಿರುದ್ದ ವಿ.ಎಸ್.ಉಗ್ರಪ್ಪ ಲೇವಡಿ ಮಾಡಿದರು. ಜಾತ್ಯಾತೀತ ಸಿದ್ದಾಂತವುಳ್ಳವರು ಕೋಮುವಾದಿ ಪಕ್ಷಕ್ಕೆ ಬೆಂಬಲ ನೀಡ್ತಾರೆ ಅಂದ್ರೆ ಯಾವ ಅರ್ಥ ಎಂದು ಪ್ರಶ್ನಿಸಿದರು.

Key words: Flood situation – state- former MP- VS ugrappa-state Government-mysore