ನೆರೆ: ಶಾಲಾ ಮಕ್ಕಳ 15 ಲಕ್ಷ ಪುಸ್ತಕ ನಾಶ

Promotion

ಬೆಂಗಳೂರು:ಆ-29: ಪ್ರವಾಹ ಮತ್ತು ಭಾರೀ ಮಳೆಯಿಂದ ಜನಸಾಮಾನ್ಯರ ಬದುಕಷ್ಟೇ ಬೀದಿಗೆ ಬಂದಿಲ್ಲ, ಶಾಲಾ ಮಕ್ಕಳ ಭವಿಷ್ಯಕ್ಕೂ ಮಾರಕವಾಗಿದೆ. ರಾಜ್ಯದ 17 ಜಿಲ್ಲೆಗಳ ಸಾವಿರಾರು ಶಾಲೆಗಳು ಮಳೆಯಿಂದ ಹಾನಿ ಗೊಳಗಾಗಿದ್ದು, ವಿದ್ಯಾರ್ಥಿಗಳ 15 ಲಕ್ಷಕ್ಕೂ ಹೆಚ್ಚು ಪುಸ್ತಕಗಳೂ ನಾಶವಾಗಿವೆ.

ಆದರೆ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲು ಹೊಸದಾಗಿ ಮುದ್ರಣ ಕೆಲಸವನ್ನು ಇನ್ನೂ ಶುರು ಮಾಡಿಲ್ಲ!

ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಧಾರವಾಡ, ಯಾದಗಿರಿ, ಕೊಪ್ಪಳ, ರಾಯಚೂರು, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ ಸೇರಿ 17 ಜಿಲ್ಲೆಗಳಲ್ಲಿ ಪ್ರವಾಹ ಬಾಧಿಸಿದೆ. ಇದರಿಂದಾಗಿ ಶಾಲಾ ಮಕ್ಕಳು ಪಠ್ಯ ಪುಸ್ತಕಗಳ ಜತೆಗೆ ಬ್ಯಾಗ್‌, ಇನ್ನಿತರ ಪರಿಕರಗಳನ್ನೂ ಕಳೆದುಕೊಂಡಿದ್ದಾರೆ.

ಆರಂಭವಾಗದ ಮುದ್ರಣ
ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಇದುವರೆಗೆ 11ರಿಂದ 12 ಲಕ್ಷ ಪುಸ್ತಕ ಮುದ್ರಣಕ್ಕೆ ಬೇಡಿಕೆ ಬಂದಿದೆ. ಎಲ್ಲ ಜಿಲ್ಲೆಗಳಿಂದ ಸೂಕ್ತ ಸಂಖ್ಯೆಯ ಬೇಡಿಕೆ ಬಂದ ಬಳಿಕವಷ್ಟೇ ಮುದ್ರಣಕ್ಕೆ ಸೂಚನೆ ನೀಡಲಾಗುತ್ತದೆ. ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ (ಎಸ್‌ಎಟಿಎಸ್‌) ಮೂಲಕ ಬೇಡಿಕೆ ಪಡೆಯದೆ ಆಫ್ಲೈನ್‌ ಮೂಲಕ ಪಡೆಯುತ್ತಿರುವುದರಿಂದ ಟೆಂಡರ್‌ ಪ್ರಕ್ರಿಯೆ ಇಲ್ಲದೆ ಈ ಹಿಂದೆ ಪುಸ್ತಕ ಮುದ್ರಿಸಿಕೊಟ್ಟಿರುವ ಮುದ್ರಕರಿಗೆ ಇದನ್ನು ವಹಿಸಲು ಇಲಾಖೆ ನಿರ್ಧರಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.

ಹಳೇ ಪುಸ್ತಕ ಹಂಚಿಕೆ
ಮುದ್ರಣ ಪ್ರಕ್ರಿಯೆ ಶುರುವಾಗದೇ ಇರುವುದ ರಿಂದ ಬೇರೆ ಬೇರೆ ವರ್ಷಗಳಲ್ಲಿ ಜಿಲ್ಲಾ ಕೇಂದ್ರದಲ್ಲಿ ಉಳಿಕೆಯಾಗಿರುವ ಪುಸ್ತಕಗಳನ್ನು ಹಂಚಿಕೆ ಮಾಡಲು ಕ್ರಮ ತೆಗೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.

ಬೇರೆ ಜಿಲ್ಲೆಗಳಿಂದ 3 ಲಕ್ಷ ಪುಸ್ತಕ
ಜಿಲ್ಲಾ ಉಪನಿರ್ದೇಶಕರು ಆಯಾ ಜಿಲ್ಲೆಗಳಲ್ಲಿ ತಮ್ಮ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರಿಂದ ನಾಶವಾಗಿರುವ ಪಠ್ಯಪುಸ್ತಕದ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಸೇರಿ 15 ಲಕ್ಷಕ್ಕೂ ಅಧಿಕ ಪುಸ ¤ಕಗಳು ನಾಶವಾಗಿರುವ ಮಾಹಿತಿ ಜಿಲ್ಲಾ ಉಪ ನಿರ್ದೇಶಕರ ಮೂಲಕ ಇಲಾಖೆಗೆ ಲಭ್ಯವಾಗಿದೆ. ಅದರಲ್ಲಿ ಸುಮಾರು 3 ಲಕ್ಷದಷ್ಟು ಪುಸ್ತಕಗಳನ್ನು ಬೇರೆ ಜಿಲ್ಲೆಗಳಿಂದ ವ್ಯವಸ್ಥೆ ಮಾಡಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸದ್ಯ ಬಂದಿರುವ ಮಾಹಿತಿ ಪ್ರಕಾರ ಸುಮಾರು 11ರಿಂದ 12 ಲಕ್ಷ ಪುಸ್ತಕ ಮುದ್ರಿಸಬೇಕಾಗು ತ್ತದೆ. ಈಗಾಗಲೇ ಮುದ್ರಿಸಿ ನೀಡಿ ರುವ ಮುದ್ರಕರ ಮೂಲಕವೇ ಈ ಪುಸ್ತಕಗಳನ್ನು ಮುದ್ರಿ ಸಲು ಮನವಿ ಮಾಡ ಲಿದ್ದೇವೆ.
– ಕೆ.ಜಿ. ರಂಗಯ್ಯ, ಉಪನಿರ್ದೇಶಕ, ಕರ್ನಾಟಕ ಪಠ್ಯಪುಸ್ತಕ ಸಂಘ
ಕೃಪೆ;ಉದಯವಾಣಿ

ನೆರೆ: ಶಾಲಾ ಮಕ್ಕಳ 15 ಲಕ್ಷ ಪುಸ್ತಕ ನಾಶ

flood-15-lakh-books-destroyed-by-school-children