ಎಪಿಎಂಸಿ ಮಾರುಕಟ್ಟೆ ಶುಲ್ಕ ಶೇಕಡ 0.35ಕ್ಕೆ ನಿಗದಿಗೊಳಿಸಿದ ಸರ್ಕಾರದ ನಿರ್ಧಾರ ಸ್ವಾಗತಿಸಿದ ಎಫ್.ಕೆ.ಸಿ.ಸಿ.ಐ…

kannada t-shirts

ಬೆಂಗಳೂರು,ಜು,30,2020(www.justkannada.in): ಎಪಿಎಂಸಿ ಮಾರುಕಟ್ಟೆ ಶುಲ್ಕ ಶೇಕಡ 0.35ಕ್ಕೆ ನಿಗದಿಗೊಳಿಸಿದ ಸರ್ಕಾರದ ನಿರ್ಧಾರವನ್ನ ಎಫ್.ಕೆ.ಸಿ.ಸಿ.ಐ. ಮಹಾಸಂಸ್ಥೆ ಸ್ವಾಗತಿಸುತ್ತದೆ ಎಂದು ಎಫ್.ಕೆ.ಸಿ.ಸಿ.ಐ ಅಧ್ಯಕ್ಷರಾದ ಸಿ ಆರ್ ಜನಾರ್ಧನ ತಿಳಿಸಿದರು. jk-logo-justkannada-logo

ಇಂದು ಎಫ್.ಕೆ.ಸಿ.ಸಿ.ಐ. ಅಧ್ಯಕ್ಷ ಸಿ ಆರ್ ಜನಾರ್ಧನರವನ್ನೊಳಗೊಂಡ ನಿಯೋಗವು  ಮುಖ್ಯಮಂತ್ರಿಗ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಎಪಿಎಂಸಿ ಮಾರುಕಟ್ಟೆ ಶುಲ್ಕ ಶೇಕಡ 0.35ಕ್ಕೆ ನಿಗದಿಗೊಳಿಸಿದಕ್ಕಾಗಿ ಕರ್ನಾಟಕದಾದ್ಯಂತ ಎಲ್ಲಾ ಎಪಿಎಂಸಿ ವರ್ತಕರ ಪರವಾಗಿ ಸನ್ಮಾನಿಸಲಾಯಿತು.fkcci-welcomes-governments-decision-apmc-market-0-35-per-cent

ರಾಜ್ಯದಲ್ಲಿರುವ ಎಪಿಎಂಸಿ ವರ್ತಕರ ಬಹುವರ್ಷಗಳ ಬೇಡಿಕೆಯಾದ ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಇಳಿಸಲು ಎಫ್.ಕೆ.ಸಿ.ಸಿ.ಐ. ಮಾಡಿದ್ದ ಮನವಿಯನ್ನು ಸರ್ಕಾರವು ಪುರಸ್ಕರಿಸಿದ್ದು, ಇದರಿಂದ ರೈತರಿಗಷ್ಟೇ ಅಲ್ಲದೇ, ಎಪಿಎಂಸಿ ವರ್ತಕರು ಹಾಗೂ ಎಪಿಎಂಸಿ ಪ್ರಾಂಗಣಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಹಿತದೃಷ್ಠಿಯನ್ನು ಕಾಪಾಡುವಲ್ಲಿ ಈ ನಿರ್ಧಾರ ಸೂಕ್ತವಾಗಿದೆ ಎಂದು  ಸಿ ಆರ್ ಜನಾರ್ಧನ ತಿಳಿಸಿದ್ದಾರೆ.

Key words: FKCCI -welcomes – government’s -decision – APMC -market- 0.35 per cent.

website developers in mysore