ಮಹಿಳಾ ಕ್ರಿಕೆಟ್’ನಲ್ಲೂ ಫಿಕ್ಸಿಂಗ್ ಭೂತ: ಬೆಚ್ಚಿಬಿದ್ದ ಬಿಸಿಸಿಐ

Promotion

ಬೆಂಗಳೂರು, ಸೆಪ್ಟೆಂಬರ್ 17, 2019 (www.justkannada.in): ಮಹತ್ವದ ಬೆಳವಣಿಯೊಂದರಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ಆಟಗಾರರೊಬ್ಬರು ಮ್ಯಾಚ್ ಫಿಕ್ಸಿಂಗ್ ನಲ್ಲಿ ಸಿಕ್ಕಿ ಬಿದಿದ್ದಾರೆ.

ಈ ಸಂಬಂಧ ಬಿಸಿಸಿಐ ಭ್ರಷ್ಟಾಚಾರ ನಿಯಂತ್ರಣ ಘಟಕ ಇಬ್ಬರ ವಿರುದ್ಧ ಸೋಮವಾರ ಎಫ್ ಐಆರ್ ದಾಖಲಿಸಿದೆ. ಫೆಬ್ರವರಿ ತಿಂಗಳಲ್ಲಿ ಸ್ವದೇಶದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆಘಾತಕಾರಿ ಸಂಗತಿಯನ್ನು ಬಿಸಿಸಿಐ ಭ್ರಷ್ಟಾಚಾರ ನಿಯಂತ್ರಣ ಘಟಕ ಸ್ಪಷ್ಟಪಡಿಸಿದೆ.

ಮ್ಯಾಚ್ಸ್ ಫಿಕ್ಸಿಂಗ್ ನಲ್ಲಿ ಸಿಕ್ಕಿ ಬಿದ್ದಿರುವ ಭಾರತೀಯ ಆಟಗಾರ್ತಿ ಅಂತಾರಾಷ್ಟ್ರೀಯ ಆಟಗಾರ್ತಿಯಾಗಿದ್ದಾರೆ. ಆದ್ದರಿಂದ ಐಸಿಸಿ ವಿಚಾರಣೆ ನಡೆಸಲಿದೆ ಎಂದು ಶೇಖಾವತ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ರಾಕೇಶ್ ಬಾಪ್ನಾ ಹಾಗೂ ಜಿತೇಂದ್ರ ಕೊಠರಿಯಾ ವಿರುದ್ಧ ಬೆಂಗಳೂರು ಠಾಣೆಯಲ್ಲಿ ಎಸಿಯು ಎಫ್ ಐಆರ್ ದಾಖಲಿಸಿದೆ.