ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆಗೆ ಬೋಟ್ ನಲ್ಲಿ ತೆರಳಿದ್ದ ಐವರು ರಕ್ಷಣಾ ಸಿಬ್ಬಂದಿ ನೀರುಪಾಲು…

ಕೊಪ್ಪಳ,ಆ,12,2019(www.justkannada.in):  ಪ್ರವಾಹದಲ್ಲಿ ಸಿಲುಕಿದ್ದವರನ್ನ ರಕ್ಷಿಸಲು ತೆರಳಿದ್ದ ಐವರು ರಕ್ಷಣಾ ಸಿಬ್ಬಂದಿಗಳು ನಾಪತ್ತೆಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ವೀರಾಪಾಪುರ ನಡುಗಡ್ಡೆಯಲ್ಲಿ ಈ ಘಟನೆ ನಡೆದಿದೆ. ತುಂಗಭದ್ರಾ ಜಲಾಶಯದ ನೀರನ್ನು ನದಿ ಪಾತ್ರಗಳಿಗೆ ಹರಿಸಿದ ಪರಿಣಾಮ ಕೊಪ್ಪಳ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ 25 ವಿದೇಶಿಯರು ಸೇರಿ 70ಕ್ಕೂ ಹೆಚ್ಚು ಮಂದಿಯನ್ನ ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದರು.

ಈ ನಡುವೆ ಉಳಿದವರ ರಕ್ಷಣೆಗಾಗಿ ವೀರಾಪಾಪುರನಡುಗಡ್ಡೆಯಲ್ಲಿ ಉಳಿದವರ ರಕ್ಷಣೆಗಾಗಿ ತೆರಳಿದ್ದ ಎನ್ ಡಿಆರ್ ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿದ್ದ ಬೋಟ್ ನಾಪತ್ತೆಯಾಗಿದೆ. ಮೂವರು ಎನ್ ಡಿಆರ್ ಎಫ್ ಸಿಬ್ಬಂದಿ ಇಬ್ಬರು ಅಗ್ನಿಶಾಮಕದಳದ ಸಿಬ್ಬಂದಿ ನೀರುಪಾಲಾಗಿದ್ದಾರೆ ಎನ್ನಲಾಗಿದೆ.

ಚೇತನ್ , ಗೌತಮ್, ನಾಗರಾಜ, ಅಗ್ನಿ ಶಾಮಕ ದಳದ ಸೂಗನಗೌಡ ನೀರುಪಾಲಾಗಿದ್ದಾರೆ. ನೀರಿಗೆ ಬಿದ್ದವರ ರಕ್ಷಣೆಗೆ ಎರಡು ಹೆಲಿಕಾಪ್ಟರ್ ಆಗಮಿಸಿದ್ದು,  ಹೆಲಿಕಾಪ್ಟರ್ ಕಾರ್ಯಾಚರಣೆ ಆರಂಭಗೊಳಿಸಿವೆ.

Key words: Five- rescue – personnel – boat –flooded-koppal