ರಾಜ್ಯದಲ್ಲಿ ಮಳೆ ಮತ್ತು ಪ್ರವಾಹಕ್ಕೆ 42 ಮಂದಿ ಬಲಿ: ಆ.16ರ ಬಳಿಕ ಸಚಿವ ಸಂಪುಟ ವಿಸ್ತರಣೆ-ಮಂಗಳೂರಿನಲ್ಲಿ ಸಿಎಂ ಬಿಎಸ್ ವೈ ಹೇಳಿಕೆ…

ಮಂಗಳೂರು,ಆ,12,2019(www.justkannada.in): ರಾಜ್ಯದಲ್ಲಿ ಮಳೆ ಮತ್ತು ಪ್ರವಾಹಕ್ಕೆ 42 ಮಂದಿ ಬಲಿಯಾಗಿದ್ದಾರೆ. ಒಟ್ಟು 86 ತಾಲ್ಲೂಕಿನ 2694 ಗ್ರಾಮಗಳಿಗೆ ಹಾನಿಯಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಮಾಹಿತಿ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ತೆರಳಿರುವ ಸಿಎಂ ಬಿಎಸ್ ಯಡಿಯೂರಪ್ಪ ಮಂಗಳೂರಿನಲ್ಲಿ ಮಾತನಾಡಿ, ಅಗಸ್ಟ್ 1ರಿಂದ 12ನೇ ತಾರೀಖಿನವರೆಗೆ ಆದ ನಷ್ಟದ ಬಗ್ಗೆ ಮಾಹಿತಿ ಇದೆ. ಮಳೆ ಮತ್ತು ಪ್ರವಾಹದಲ್ಲಿ ಸಿಲುಕಿ ಈವರೆಗೆ  12 ಮಂದಿ ನಾಪತ್ತೆಯಾಗಿದ್ದಾರೆ.  ಸುಮಾರು 1,181 ಪರಿಹಾರ ಕೇಂದ್ರಗಳನ್ನ ಸ್ಥಾಪಿಸಲಾಗಿದ್ದು ಪ್ರವಾಹದಲ್ಲಿ ಸಿಲುಕಿದ್ದ 5,81,897 ಜನರನ್ನ ಸ್ಥಳಾಂತರಿಸಲಾಗಿದೆ. ರಾಜ್ಯದ ಒಟ್ಟು 31,800 ಮನೆಗಳಿಗೆ ಹಾನಿ ಸಂಭವಿಸಿದ್ದು 42 ಮಂದಿ ನೆರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.

ಹಾಗೆಯೇ  ಪ್ರವಾಹದಲ್ಲಿ 548 ಜಾನುವಾರುಗಳು ಸಾವನ್ನಪ್ಪಿವೆ.  ಪ್ರವಾಹದಲ್ಲಿ ಸಿಲುಕಿದ್ದ 50,595 ಪ್ರಾಣಿಗಳನ್ನ ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದರು. ಅಗಸ್ಟ್ 16ರ ನಂತರ ದೆಹಲಿಗೆ ತೆರಳಿ ಅಮಿತ್ ಶಾ ಅವರನ್ನ ಭೇಟಿಯಾಗುತ್ತೇನೆ.  ಅಗಸ್ಟ್ 6ರ ನಂತರ  ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದರು.

Key words: Expansion – Cabine-t after –august- 16th – CM BS yeddyurappa- mangalore