ಇಂದು ಮೂವರು ಶಾಸಕರ ವಿಚಾರಣೆ: ಜನರಿಗಾಗಿರುವ ನೋವಿಗೆ ಗೌರವ ಕೊಡ್ತೇನೆ- ಸ್ಪೀಕರ್ ರಮೇಶ್ ಕುಮಾರ್…..

ಬೆಂಗಳೂರು,ಜು,12,2019(www.justkannada.in):  ರಾಜೀನಾಮೆ ಕ್ರಮಬದ್ಧವಾಗಿಲ್ಲದ ಕಾರಣ ಶಾಸಕರು ಮತ್ತೆ ರಾಜೀನಾಮೆ ನೀಡಿಲು ಬಂದಿದ್ದರು. ಇಂದು ಮೂರು ಗಂಟೆಗೆ ಮೂವರು ಶಾಸಕರ ವಿಚಾರಣೆ ನಡೆಸಲಾಗುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್,ರಾಜ್ಯದಲ್ಲಿ ಹೊಸ ಬೆಳವಣಿಗೆ ನಡೆದಿಲ್ಲ.  ಕಾಂಗ್ರೆಸ್ ಪಕ್ಷದವರು ಏನ್ ಮಾಡ್ತಾರೆ ನನಗೇನು ಗೊತ್ತು.. ನಾವು ಗಾಂಧಿ ತತ್ವ ಅನುಸರಿಸುವವರು. ನಾನು ಸಂವಿಧಾನದ ಮೇಲೆ ಅತ್ಯಾಚಾರ ಮಾಡೋದಿಲ್ಲ, ನನಗೆ ಸಂವಿಧಾನವೇ ಅಂತಿಮ, ಸಂವಿಧಾನ ಪ್ರಕಾರವೇ ನಾನು ನಡೆದುಕೊಳ್ಳುವುದು ಎಂದು ಹೇಳಿದರು.

ನಾವು ರಾಜ್ಯದ ಜನರಿಗೆ ಆಗಿರುವ ನೋವಿಗೆ ಗೌರವ ಕೊಡುತ್ತೇನೆ. ಇಂದು ಮೂವರು ಶಾಸರನ್ನ ವಿಚಾರಣೆ ಮಾಡುತ್ತೇನೆ. ಅವರು ಬಂದು ವಿವರಣೆ ನೀಡಲಿದ್ದಾರೆ. ನಾನು ನೃತ್ಯ ಮಾಡುವವನು ಅಲ್ಲ ಯಾರನ್ನು ಕೂಡ ನಾನು ಸಮಾಧಾನ ಮಾಡೋದಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.

Key words: Respect – pain –people-Speaker -Ramesh Kumar.