Monday, September 28, 2026

BDA Apartments

ಶ್ರೀರಂಗಪಟ್ಟಣ ದಸರಾಗೆ ಐದು ಆನೆಗಳನ್ನ ಕಳುಹಿಸಬೇಕಿದೆ- ಡಿಸಿಎಫ್ ಡಾ. ಕರಿಕಾಳ...
Home Front Page ಶ್ರೀರಂಗಪಟ್ಟಣ ದಸರಾಗೆ ಐದು ಆನೆಗಳನ್ನ ಕಳುಹಿಸಬೇಕಿದೆ- ಡಿಸಿಎಫ್ ಡಾ. ಕರಿಕಾಳನ್.

ಶ್ರೀರಂಗಪಟ್ಟಣ ದಸರಾಗೆ ಐದು ಆನೆಗಳನ್ನ ಕಳುಹಿಸಬೇಕಿದೆ- ಡಿಸಿಎಫ್ ಡಾ. ಕರಿಕಾಳನ್.

ಮೈಸೂರು,ಸೆಪ್ಟಂಬರ್,23,2022(www.justkannada.in): ಈ ಬಾರಿ ಶ್ರೀರಂಗಪಟ್ಟಣ ದಸರಾಗೆ  ಐದು ಆನೆಗಳನ್ನ ಕಳುಹಿಸಬೇಕಿದೆ.  ಆದರೆ ಇನ್ನೂ  ಫೈನಲ್ ಆಗಿಲ್ಲ ಎಂದು ಡಿಸಿಎಫ್ ಡಾ. ಕರಿಕಾಳನ್ ಮಾಹಿತಿ ನೀಡಿದರು.

ಫಿರಂಗಿ ತಾಲೀಮಿನ ಬಳಿಕ ಮಾತನಾಡಿದ ಡಿಸಿಎಫ್ ಡಾ. ಕರಿಕಾಳನ್, ಶ್ರೀರಂಗಪಟ್ಟಣ ದಸರೆಗೆ 5ಆನೆಗಳು ಬೇಕು ಎಂದು ಕೇಳಿದ್ದಾರೆ. ಅರಣ್ಯ ಇಲಾಖೆಯ ಮುಖ್ಯಸ್ಥರಿಂದ ಈ ಬಗ್ಗೆ ನಮಗೆ ಮಾಹಿತಿ ಸಿಕ್ಕಿಲ್ಲ. ಆನೆಗಳನ್ನ ಕಳುಹಿಸಬೇಕಾದರೆ ಈ ಬಾರಿ ಎಸ್.ಒ.ಪಿ ತಯಾರು ಮಾಡಿದ್ದೇವೆ.

ಆನೆಗಳ ಸುತ್ತಲೂ 10 ಅಡಿ ಅಂತರದಲ್ಲಿ ಯಾರು ಬಾರದಂತೆ ಜಾಗ್ರತೆ ವಹಿಸಬೇಕು. ಪಟಾಕಿ ಸಿಡಿಸುವುದು, ಡ್ರೋಣ್ ಬಳಸುವುದು, ಜನರು ಹತ್ತಿರ ಬರುವುದನ್ನ ನಿಷೇಧಿಸಿದ್ದೇವೆ. ನಮ್ಮ ವೈದ್ಯರು, ಸಿಬ್ಬಂದಿಯು ಕೂಡ  ಅಲ್ಲಿ ಇರಲಿದ್ದಾರೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಆಯೋಜಕರು ವಹಿಸಬೇಕು. ಈ ಬಾರಿ ಮಹೇಂದ್ರ  ಆನೆಗಳೊಂದಿಗೆ ಇತರೆ ನಾಲ್ಕು ಆನೆಗಳನ್ನ ಕಳುಹಿಸಲಾಗುವುದು ಎಂದು ಡಿಸಿಎಫ್ ಡಾ. ಕರಿಕಾಳನ್ ತಿಳಿಸಿದರು.

Key words: Five elephants–Srirangapatna-dasara- DCF -Dr. Karikalan.