ಮಯೂರಿ ಬರ್ತಡೇ ಸಡಗರದಲ್ಲಿ ‘ಆದ್ಯಂತ’ ಸಿನಿಮಾದ ಫಸ್ಟ್‌ಲುಕ್‌ ರೀಲೀಸ್‌

Promotion

ಬೆಂಗಳೂರು,ಜು,11,2020(www.justkannada.in):  ಕೃಷ್ಣಲೀಲಾ ಸಿನಿಮಾದ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದ ಮಯೂರಿಯವರ ಹೊಸ ಸಿನಿಮಾ “ಆದ್ಯಂತ” ಟೈಟಲ್‌ನ ಫಸ್ಟ್‌ಲುಕ್ ಇಂದು ಮಯೂರಿಯವರ ಹುಟ್ಟಿದ ದಿನದ ಸಂಭ್ರದೊಂದಿಗೆ‌ ರಿಲೀಸ್ ಆಗಿದೆ.

ರಮೇಶ್‌ ಬಾಬು ನಿರ್ಮಾಣದ, ಪುನೀತ್‌ ಶರ್ಮನ್‌ ನಿರ್ದೇಶಿ‌ಸಿರುವ ಆದ್ಯಂತ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್ ಅನ್ನು ಇಂದು ಬಿಡುಗಡೆ ಮಾಡಿದ್ದಾರೆ.firstluck-release-adyantha-mayuri-birthday

ಅಶ್ವಿನಿ ನಕ್ಷತ್ರ ಧಾರವಾಹಿಯ ಮೂಲಕ ಕಿರುತೆರೆ ಪರಿಯವಾದ ನಟಿ ಮಯೂರಿ, ಸೀರಿಯಲ್‌ ಪ್ರೇಮಿಗಳ ಮನದಲ್ಲಿ ಮನೆ ಮಾಡಿದ್ದ ಮಯೂರಿಯವರು ಕೃಷ್ಣಲೀಲಾ, ಇಷ್ಟಕಾಮ್ಯ, ನಟರಾಜ ಸರ್ಮಿಸ್‌, ರುಸ್ತುಂ, ಪೊಗರು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಮಹಿಳಾ ಕೇಂದ್ರಿತ ಥ್ರಿಲ್ಲಿಂಗ್ ಚಿತ್ರದಲ್ಲಿ ನಟಿಸಿದ್ದಾರೆ. “ಆದ್ಯಂತ” ಸಿನಿಮಾ ಚಿತ್ರೀಕರಣ ಕಂಪ್ಲೀಟ್‌ ಆಗಿದ್ದು, ಲಾಕ್‌ಡೌನ್‌ನಿಂದಾಗಿ ಚಿತ್ರಮಂದಿರಗಳು ಮುಚ್ಚಿರುವುದರಿಂದ ರಿಲೀಸ್‌ಗೆ ಡೇಟ್‌ ಇನ್ನೂ ಫಿಕ್ಸ್‌ ಆಗಿಲ್ಲ.

ಆದ್ಯಂತ ಚಿತ್ರವೂ ಕಂಪ್ಲೀಟ್‌ ಥ್ರಿಲ್ಲಿಂಗ್‌ ಸಿನಿಮಾವಾಗಿದ್ದು, ಬೆಂಗಳೂರಿನಲ್ಲಿ ಕೆಲಸಮಾಡುತ್ತಿದ್ದ ಚಿತ್ರದ ನಾಯಕಿ ದೀಪಾಳಿಗೆ (ಮಯೂರಿ) ಅಚಾನಕ್ಕಾಗಿ ತನ್ನ ಅಜ್ಜಿ ಬರೆದ ಆಸ್ತಿಯ ವಿಲ್ ಪತ್ರ ದೊರೆಯುತ್ತದೆ. ಆರ್ಥಿಕವಾಗಿ ತೊಂದರೆಯಲ್ಲಿದ್ದ ದೀಪ ವಿಲ್‌ನಲ್ಲಿ ಬರೆಯಲ್ಲಾಗಿದ್ದ ಆಸ್ತಿಯನ್ನು ಮಾರಾಟಮಾಡಲು ಸಕಲೇಶಪುರದ ಎಸ್ಟೇಟ್‌ಗೆ ತನ್ನ ಪ್ರೇಮಿಯೊಂದಿಗೆ ಬರುತ್ತಾಳೆ.

ಎಸ್ಟೇಟ್‌ ಮನೆಗೆ ಬಂದ ನಂತರ ಅಲ್ಲಿ ನಡೆಯುವ ವಿಚಿತ್ರ ಘಟನೆಗಳು. ಅವಳ ಆಸ್ತಿ ಮಾರಾಟಕ್ಕೆ ಸಹಕರಿಸುವ ಆ ಊರಿನ ಹಿರಿಯ ಐತಾಳರಿಗೂ(ರಮೇಶ್‌ ಭಟ್‌) ಹಾಗೂ ದಿಲೀಪನಿಗೂ ಆಕೆಯಲ್ಲಾಗುವ ಬದಲಾವಣೆಗಳು ಮತ್ತು ಘಟನೆಗಳು ಗಾಬರಿಯನ್ನುಂಟು ಮಾಡುತ್ತವೆ. ಸಮಸ್ಯೆಯನ್ನು ಬಗೆಹರಿಸಲು ಮುಂದಾಗುವ ದಿಲೀಪ್‌, ಆ ಸಂದರ್ಭದಲ್ಲಿ ಆತನ ಅರಿವಿಗೆ ಬರುವ ಶಾಕಿಂಗ್ ವಿಷಯಗಳು ಸಿನಿಮಾದ ಕತೆಯಾಗಿದೆ.

ರಾಜಮೌಳಿಯವರೊಂದಿಗೆ ಕೆಲಸ ಮಾಡಿದ್ದ ನಿದೇರ್ಶಕ ಪುನೀತ್‌ ಶರ್ಮನ್ ಅವರ ನಿರ್ದೇಶನದಲ್ಲಿ ನಿರ್ಮಾಣವಾಗಿರುವ ಆದ್ಯಂತ ಸಿನಿಮಾ ಥ್ರಿಲ್ಲಿಂಗ್‌ ಆಗಿದೆ ಎಂದು ನಿರ್ಮಾಪಕ ರಮೇಶ್‌ ಬಾಬು ಹೇಳಿದ್ದಾರೆ. ಸಿನಿಮಾದ ಫಸ್ಟ್‌ ಲುಕ್‌ ಇಂದು ಬಿಡುಗಡೆಯಾಗಿದ್ದು, ಸಿನಿಮಾ ಬಿಡುಗಡೆಗಾಗಿ ಕಾದು ನೋಡಬೇಕಿದೆ.

Firstluck -Release -adyantha- Mayuri -Birthday.