ಫಲ ನೀಡಿದ ಬಿಡಿಎ ಪ್ರಚಾರ ತಂತ್ರ : ಇ-ಹರಾಜು ಮೂಲಕ ಬಿಡಿಎಗೆ ಹರಿದು ಬಂದು 210.82 ಕೋಟಿ ರೂ.

 

ಬೆಂಗಳೂರು, ಜು.11, 2020 : (www.justkannada.in news) : ಇದೇ ಮೊದಲ ಬಾರಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಇ-ಬಿಡ್ ಮೂಲಕ ಅಧಿಕ ಸಂಖ್ಯೆಯ ನಿವೇಶನಗಳ ಹರಾಜು ನಡೆಸಿದೆ. ಜತೆಗೆ ಅಧಿಕ ಮೊತ್ತವನ್ನು ಸಹ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

ಇ-ಹರಾಜು ಮೂಲಕ ಬಿಡಿಎ ಈ ಯಶಸ್ಸು ಗಳಿಸಲು ಮುಖ್ಯ ಕಾರಣ, ವಿನೂತನ ಪ್ರಚಾರ ತಂತ್ರ ಅನುಸರಿಸಿದ್ದು. ಈ ಮೊದಲು ಬಿಡಿಎ, ದಿನ ಪತ್ರಿಕೆಗಳಿಗೆ ರೊಸ್ಟರ್ ಆಧಾರದ ಮೇಲೆ ಕೆಲವೇ ಎರಡು ಪತ್ರಿಕೆಗಳಿಗೆ ಒಂದು ಪೂರ್ಣ ಪುಟದ ಜಾಹಿರಾತು ನೀಡುತ್ತಿತ್ತು. ಈ ರೀತಿಯ ಪ್ರಚಾರದಿಂದ ಕೇವಲ ಬಿಡಿಎ ಗೆ ಸಂಬಂಧಿಸಿದ ಬ್ರೋಕರ್ ಗಳಿಗೆ ಮತ್ತು ಬಿಡಿಎ ಜತೆಗೆ ಸಂಪರ್ಕದಲ್ಲಿರುವ ವೈಕ್ತಿಗಳಿಗಷ್ಟೇ ಇ- ಹರಾಜು ಬಗ್ಗೆ ತಿಳಿಯಿತಿತ್ತು.

BDA-corner-site-online-auction-record-break-digital-marketing

ಈ ರೀತಿಯ ಸಂಪ್ರದಾಯಿಕ ಪ್ರಚಾರದಿಂದ ಬಿಡಿಎ ಪ್ರತಿ ತಿಂಗಳು ಹಾಕುತ್ತಿದ್ದ 50 ಸೈಟ್ ಗಳ ಪೈಕಿ, ಇ – ಹರಾಜು ಮೂಲಕ 15 ರಿಂದ 20 ಸೈಟ್ ಗಳು ಮಾತ್ರ ಹರಾಜು ಹಾಕಲ್ಪಡುತ್ತಿದ್ದವು.

ಆದರೆ ಈ ಬಾರಿ ನೂತನ ಆಯುಕ್ತ ಡಾ.ಮಹಾದೇವ್ ಅವರ ನೇತೃತ್ವದಲ್ಲಿ ಬಿಡಿಎ ಯ ಸಾರ್ವಜನಿಕ ಸಂಪರ್ಕ ವಿಭಾಗಕ್ಕೆ ಹೊಸದಾಗಿ ಬಂದಿರುವ ಡಾ.ಗಿರೀಶ್ ಮೈಸೂರು ಅವರು ಪ್ರಚಾರದ ತಂತ್ರ ಬದಲಿಸಿದರು. ಬದಲಾದ ಪ್ರಚಾರದ ತಂತ್ರಗಳನ್ನು ಅಳವಡಿಸಿಕೊಂಡಿದ್ದು ಯಶಸ್ವಿ ಕಾರಣಗಳಲ್ಲಿ ಒಂದಾಗಿದೆ ಎನ್ನಬಹುದು.

jk-logo-justkannada-logo

ಕೇವಲ ದಿನಪತ್ರಿಕೆ ಮಾತ್ರ ನೆಚ್ಚಿಕೊಳ್ಳದೆ, ದಿನಪತ್ರಿಕೆಗಳ ರೊಸ್ಟರ್ ಪದ್ಧತಿ ಜತೆಗೆ ಸಂಪ್ರದಾಯಕ ಮಾದರಿಯ ಎರಡು ದಿನಪತ್ರಿಕೆಗಳಿಗೆ ತಗಲುತ್ತಿದ್ದ ವೆಚ್ಚದಲ್ಲೇ ಕಾರ್ಪೋರೇಟ್ ಶೈಲಿಯಲ್ಲಿ ಇಂಗ್ಲಿಷ್ ಮತ್ತು ಕನ್ನಡದ ಎಲ್ಲಾ ದಿನಪತ್ರಿಕೆಗಳಿಗೂ ಜಾಹೀರಾತು ಬಿಡುಗಡೆ ಮಾಡಿದ್ದು, ಜತೆಗೆ ಎಲ್ಲಾ ನ್ಯೂಸ್ ಮತ್ತು ಮನರಂಜನಾ ಚಾನಲ್ ಗಳಲ್ಲಿ , ಆನ್ ಲೈನ್ ಮೀಡಿಯಾಗಳಲ್ಲಿ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಮೂಲಕ ನಿವೇಶನಗಳ ಹರಾಜು ಬಗ್ಗೆ ವ್ಯಾಪಕ ಪ್ರಚಾರ ನೀಡಿದ್ದು ವಿಶೇಷ.

ಈ ರೀತಿಯಲ್ಲಿ ಪ್ರಚಾರ ಮಾಡಿದ್ದರಿಂದ ಬಿಡಿಎ ‘ಇ -ಬಿಡ್ ‘ ಗೆ ಹೆಚ್ಚಿನ ಬೇಡಿಕೆ ಲಭಿಸಿ ನಿಗದಿತ ಗುರಿ ತಲುಪಲು ಸಾಧ್ಯವಾಗಿದೆ. ಬಿಡ್ಡಿಂಗ್ ನ ಕೊನೆಯ ದಿನದ ವರೆಗೂ ವ್ಯವಸ್ಥಿತ ಪ್ರಚಾರ ಮಾಡಿದ್ದು, ಹರಾಜು ಹೆಚ್ಚಾಗಲು ಹಲವು ಕಾರಣಗಳಲ್ಲಿ ಒಂದಾಗಿದೆ.
ಇದರ ಜೊತೆಗೆ ಬಿಡಿಎ ವೆಬ್ಸೈಟ್ ನಲ್ಲಿ ಇ- ಹರಾಜಿಗೆ ಸಂಬಂಧಿಸಿದ ಯಾವುದೇ ಮಾಹಿತಿಗಳು ಸಾಮಾನ್ಯ ನಾಗರಿಕರಿಗೆ ಲಭಿಸುತ್ತಿರಲಿಲ್ಲ. ಈ ವಿಷಯವನ್ನು ಅರಿತು EDP ವಿಭಾಗದ ಯುವ ಇಂಜಿನಿಯರ್ ಗಳನ್ನು ಹುರಿದುಂಬಿಸಿ, ಆಸಕ್ತಿವುಳ್ಳ ಸಾಮಾನ್ಯ ನಾಗರಿಕ ಬಿಡ್ಡುದಾರರು ದೂರವಾಣಿ ಮೂಲಕ ಸಂಪರ್ಕಿಸಿದರೆ “ಇ – ಹರಾಜಿನ” ಬಗ್ಗೆ ವಿವರಿಸಲಾಯಿತು. ವೆಬ್ಸೈಟ್ ನಲ್ಲಿ ಮಾಹಿತಿ ಲಭಿಸುವಂತೆ ಇ-ಹರಾಜಿಗೆ ಸಂಬಂಧಿಸಿದ ಡೆಮೋ ವಿಡಿಯೋ ಸಿದ್ದಪಡಿಸಿ ವೆಬ್ಸೈಟ್ ನಲ್ಲಿ ಅಳವಡಿಸಲಾಯಿತು. ಯುವ ಇಂಜಿನಿಯರ್ ಗಳು ಉತ್ಸಾಹದಿಂದ ಬಿಡ್ಡ್ ದಾರರೊಂದಿಗೆ ಸಂವಾದ ನಡೆಸಿದರು.

BDA-corner-site-online-auction-record-break-digital-marketing

ಈ ಹಿಂದೆ ಪ್ರತಿ ತಿಂಗಳು 50 ನಿವೇಶನ ಹರಾಜು ಮಾಡಲಾಗುತ್ತಿತ್ತು. ಆ ವೇಳೆ ಶೇಕಡಾ 40% ಮಾತ್ರ ಬಿಡಿಎ ಗುರಿ ತಲುಪುತ್ತಿತ್ತು.
ಈ ಬಾರಿ ಸಾಮಾನ್ಯ – ಮಧ್ಯಮ ವರ್ಗದ ಜನರು ಹಾಗೂ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಹರಾಜಿನಲ್ಲಿ ಭಾಗವಹಿಸಿದ್ದಾರೆ.
ಇದು ಎಷ್ಟರ ಮಟ್ಟಿಗೆ ಯಶ ನೀಡಿತು ಎಂದರೆ, ವೆಬ್ ಸೈಟ್ ಗೆ ಇ-ಬಿಡ್ ದಾರರ ಪ್ರವಾಹವೇ ಹರಿದು ಬರತೊಡಗಿತು. ಸುಮಾರು 2200 ಬಿಡ್ ದಾರರು ನಾಲ್ಕು ಲಕ್ಷ ಪಾವತಿಸಿ ನೋಂದಣಿ ಮಾಡಿಕೊಂಡರು. ಕಡೆಯ ದಿನಾಂಕದಂದು ಬಿಡ್ ಮಾಡುವವರ ಸಂಖ್ಯೆ ದುಪ್ಪಟಾಯಿತು. ಪರಿಣಾಮ ಬಹುತೇಕರಿಗೆ ಬಿಡ್ ಮಾಡಲಾಗದೆ, ವೆಬ್ಸೈಟ್ ನಲ್ಲಿ ತಾಂತ್ರಿಕ ತೊಂದರೆ ಎದುರಾಗಿ ಅವಧಿ ವಿಸ್ತರಿಸುವಂತೆ ಕೋರಿ ಮಾಧ್ಯಮಗಳ ಮೂಲಕ ಬಿಡಿಎ ಮೊರೆ ಹೋದರು.

ಬಿಡಿಎ ಆಯುಕ್ತ ಎಚ್.ಆರ್.ಮಹಾದೇವ ಅವರಿಗೆ, ಇ-ಬಿಡ್ ದಿನಾಂಕ ವಿಸ್ತರಿಸುವುದನ್ನು ಹೊರತು ಪಡಿಸಿ ಬೇರೆ ಮಾರ್ಗವಿರಲಿಲ್ಲ. ಕಡೆಗೆ ಕಾಲಾವಕಾಶ ವಿಸ್ತರಿಸಿದರು. ಪರಿಣಾಮ ದಾಖಲೆ ಸಂಖ್ಯೆಯಲ್ಲಿ ನಿವೇಶಗಳು ಬಿಡ್ ಮೂಲಕ ಹರಾಜಾಯಿತು.

ಬಿಡಿಎ ಹರಾಜಿಗಿಟ್ಟ 195 ಸೈಟುಗಳ ಪೈಕಿ ಶೇ. 85ರಷ್ಟು ಸೈಟುಗಳು ಹರಾಜಾಗಿವೆ. ಹರಾಜಿಗಿದ್ದ 195 ಸೈಟುಗಳಿಗೆ 2,500 ಕ್ಕೂ ಹೆಚ್ಚು ಜನ ಬಿಡ್ ಮಾಡಿದ್ದರು. 195 ಸೈಟುಗಳ ಪೈಕಿ 10 ಸೈಟುಗಳಿಗೆ ಯಾರೂ ಬಿಡ್ ಮಾಡಲಿಲ್ಲ. 19 ಸೈಟುಗಳಿಗೆ ಯಾರೂ ಸರಿಯಾದ ಮೊತ್ತ ಬಿಡ್ ಮಾಡದಿದ್ದರಿಂದ ರದ್ದು ಮಾಡಲಾಯ್ತು. ಈ ಹಿನ್ನಲೆ 166 ಕಾರ್ನರ್​ ಸೈಟುಗಳು ಹರಾಜಾಗಿವೆ. ಈ 166 ಸೈಟುಗಳ ಮಾರಾಟದಿಂದ ಬಿಡಿಎಗೆ ಬರಲಿದೆ 210.82 ಕೋಟಿ ರೂಪಾಯಿ. ಸೈಟುಗಳನ್ನು ಬಿಡ್ ಮಾಡಿದವರು ಮೂರು ದಿನದಲ್ಲಿ ಶೇ. 25 ರಷ್ಟು ಮುಂಗಡ ಪಾವತಿಸಬೇಕು. ಇದರಿಂದಲೇ , ಮೂರು ದಿನದಲ್ಲಿ ಒಟ್ಟು 52.70 ಕೋಟಿ ರೂಪಾಯಿ ಬಿಡಿಎಗೆ ಸಂದಾಯವಾಗಲಿದೆ.

 

key words : BDA-corner-site-online-auction-record-break-digital-marketing