ತಾಂತ್ರಿಕ ದೋಷ:  ಮೈಸೂರು ವಿವಿಯ ಪ್ರಥಮ ವರ್ಷದ ಪ್ರವೇಶಾತಿ ಮುಂದೂಡಿಕೆ

Promotion

ಮೈಸೂರು,ಜನವರಿ,6,2022(www.justkannada.in):  ಪ್ರಥಮ ವರ್ಷದ ಸ್ನಾತಕೋತ್ತರ ಕೋರ್ಸ್‌ ಗಳ ಪ್ರವೇಶಾತಿ ಸಂಬಂಧ ಈಗಾಗಲೇ ಪ್ರಕಟಿಸಿದ್ದ Seat Allotment  ಪಟ್ಟಿಯಲ್ಲಿ ತಾಂತ್ರಿಕದೋಷದಿಂದ ಕೆಲವು ನ್ಯೂನತೆಗಳು ಕಂಡುಬಂದಿದ್ದರಿಂದ ತಾತ್ಕಾಲಿಕವಾಗಿ ಪ್ರವೇಶಾತಿಗಳನ್ನು ತಡೆಹಿಡಿಯಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರು (ಶೈಕ್ಷಣಿಕ) ತಿಳಿಸಿದ್ದಾರೆ.

ಆಯ್ಕೆ ಪಟ್ಟಿಗಳನ್ನು ಸದ್ಯದಲ್ಲಿಯೇ ಪರಿಷ್ಕರಿಸಿ, ಪ್ರಕಟಿಸಿ, ಪ್ರವೇಶಾತಿ ದಿನಾಂಕಗಳನ್ನು ತಿಳಿಸಲಾಗುವುದು. ಈ ಅಂಶವನ್ನು ವಿದ್ಯಾರ್ಥಿಗಳ ಗಮನಕ್ಕೆ ತರಬೇಕು. ಅಲ್ಲದೆ, ಅಧ್ಯಯನ ವಿಭಾಗಗಳಲ್ಲಿ ಈಗಾಗಲೇ ಪ್ರಕಟಿಸಿರುವ ಪಟ್ಟಿಗಳನ್ನು ಹಿಂತೆಗೆದುಕೊಳ್ಳಬೇಕೆಂದು ವಿಶ್ವವಿದ್ಯಾನಿಲಯದ ಅಧ್ಯಯನ ವಿಭಾಗದ ಅಧ್ಯಕ್ಷರು, ನಿರ್ದೇಶಕರು, ಸ್ನಾತಕೋತ್ತರ ಕೇಂದ್ರದ ನಿರ್ದೇಶಕರು/ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಸ್ನಾತಕೋತ್ತರ ಕೋರ್ಸ್ ಗಳನ್ನು ನಡೆಸುತ್ತಿರುವ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಸೂಚಿಸಲಾಗಿದೆ.

ತಂತ್ರಾಂಶದಲ್ಲಿನ ಲೋಪದೋಷಗಳನ್ನು ಶೀಘ್ರದಲ್ಲಿ ಸರಿಪಡಿಸಿ ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣ(web site)ದಲ್ಲಿ ಪ್ರಕಟಿಸಲು ಕ್ರಮಕೈಗೊಳ್ಳಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಗೊಳ್ಳದ ಮೈಸೂರು ವಿಶ್ವವಿದ್ಯಾನಿಲಯದ ಆಡಳಿತವರ್ಗದೊಡನೆ ಸಹಕರಿಸಬೇಕೆಂದು ಕುಲಸಚಿವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ENGLISH SUMMARY…

Admission for 1st year PG courses of UoM postponed due to technical glitch
Mysuru, January 6, 2022 (www.justkannada.in): The admission process for the first year postgraduate courses has been postponed due to technical glitches in the seat allotment list, as informed by the Registrar (Academics), University of Mysore.
The selection list will be revised and published and the admission dates will be announced again soon. Principals of the colleges running PG courses that come under the University of Mysore, Chairman of the research division, Director, PG Center Directors have been informed to withdraw the lists that have already been announced in the research divisions.
The technical glitches will be set right soon and the corrected list will be published in the University official website soon. Students and parents are requested not to worry and cooperate with the University administration, according to the press release issued by the Registrar (Academics).
Keywords: University of Mysore/ technical glitch/ admissions/ postponed

Key words: First year- admissions -postponement – Mysore university