ಬಿಜೆಪಿಗೆ ಹೋಗಲು ಮೊದಲು ಆಫರ್ ಕೊಟ್ಟಿದ್ದೇ ನನಗೆ- ಕೈ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್  ಹೊಸಬಾಂಬ್

Promotion

ಬೆಳಗಾವಿ,ನ,27,2019(www.justkannada.in): ವಿಧಾನಸಭಾ ಚುನಾವಣಾ ಫಲಿತಾಂಶ ಬಂದ ಒಂದು ವಾರದಲ್ಲೇ ಅಪರೇಷನ್ ಕಮಲಕ್ಕೆ ಯತ್ನಿಸಲಾಗಿತ್ತು. ಬಿಜೆಪಿಗೆ ಹೋಗಲು ಮೊದಲು ನನಗೆ ಆಫರ್ ಕೊಡಲಾಗಿತ್ತು ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಬೆಳಗಾವಿಯ ಅಥಣಿಯಲ್ಲಿ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್,  ವಿಧಾನಸಭಾ ಚುನಾವಣಾ ಫಲಿತಾಂಶ ಬಂದ ಒಂದು ವಾರದಲ್ಲಿ ಹೈದರಾಬಾದ್ ನಲ್ಲಿ ಸಭೆ ಕರೆದಿದ್ದರು. ದೋಸ್ತಿ ಸರ್ಕಾರದ ರಚನೆಗೂ ಮುನ್ನವೇ ಗೋಕಾಕ್ ಮೂಲದ ದೊಡ್ಡವರು ನನ್ನನ್ನು ಹೈದರಾಬಾದ್ ನಲ್ಲಿ ಸಭೆ ಇದೆ ಎಂದು ಕರೆದು ಬಿಜೆಪಿಗೆ ಸೇರುವಂತೆ ಆಹ್ವಾನ ನೀಡಿದ್ದರು. ಆದರೆ ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಎಲ್ಲೂ ಬರುವುದಿಲ್ಲ ಎಂದು ಹೇಳಿ ಸಭೆಯಿಂದ ಹೊರಬಂದೆ. ಸಭೆಯಲ್ಲಿ ಮಹೇಶ್ ಕುಮುಟಳ್ಳಿ ಸಹ ಉಪಸ್ಥಿತರಿದ್ದರು ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ರಚನೆಗೂ ಮುನ್ನವೇ ಅಪರೇಷನ್ ಕಮಲಕ್ಕೆ ಯತ್ನ ನಡೆದಿದ್ದು, ಫಲಿತಾಂಶ ಬಂದು ಒಂದು ವಾರದಲ್ಲೇ ಕಾಂಗ್ರೆಸ್ ಬಿಡಲು ನಿರ್ಧರಿಸಿದ್ದ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ನೀಡಿದರು.

Key words: first offer –join- BJP-congress- MLA-Lakshmi Hebbalkar