ರಿಸಲ್ಟ್ ಬಳಿಕ ಒಂದೇ ವಾರದಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿಯಿಂದ ಹೊರಗೆ ಬರ್ತಾರೆ-ದಿನೇಶ್ ಗುಂಡೂರಾವ್ ಭವಿಷ್ಯ…..

ಬೆಳಗಾವಿ,ನ,27,2019(www.justkannada.in):  ಉಪಚುನಾವಣೆಯ ಫಲಿತಾಂಶ ಪ್ರಕಟವಾದ ಒಂದು ವಾರದಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿ ಬಿಟ್ಟು ಹೊರ ಬರ್ತಾರೆ ನೋಡಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭವಿಷ್ಯ ನುಡಿದಿದ್ದಾರೆ.

ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ಇಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಚುನಾವಣೆ ಫಲಿತಾಂಶದ ಬಳಿಕ ರಮೇಶ್ ಬಿಜೆಪಿಯಲ್ಲಿ ಇರ್ತಾರಾ ನೋಡೋಣ, ರಿಸಲ್ಟ್ ಬಳಿಕ ಒಂದೇ ವಾರದಲ್ಲಿ ರಮೇಶ್ ಜಾರಕಿಹೊಳಿಯವರೇ ಹೊರಗೆ ಬರ್ತಾರೆ ನೋಡಿ. ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ಬಾಗಿಲು ಬಂದ್ ಆಗಿದೆ. ಆದರೆ ಅವರಿಗೆ ಬಿಜೆಪಿಯಲ್ಲಿ ಇರಲು ಆಗಲ್ಲ. ಜೆಡಿಎಸ್ ಪಕ್ಷಕ್ಕೆ ಹೋಗಲೂ ಆಗಲ್ಲ. ತಮ್ಮದೇ ಒಂದು‌ ಪಕ್ಷ ಕಟ್ಟಿಕೊಳ್ಳಬೇಕು ಅಷ್ಟೇ ಎಂದು ಕುಟುಕಿದರು.

ರಾಜ್ಯದಲ್ಲಿ ಬಿಜೆಪಿ ನೀತಿ ನಿಯಮ ಇಲ್ಲದೆ ಸರ್ಕಾರ ರಚನೆ ಮಾಡಿದೆ. ಎರಡು ತಿಂಗಳಿನಿಂದ ವಿಧಾನಸೌಧದಲ್ಲಿ ಸೂತಕದ ಛಾಯೆ ಕಂಡು ಬರುತ್ತಿದೆ. ಚುನಾವಣೆ ಗೆಲ್ಲಲು ಹಣ ಬೇಕಾಗಿದ್ದು, ಇದಕ್ಕಾಗಿ ಬಿಜೆಪಿ ಸರ್ಕಾರ ವರ್ಗಾವಣೆ ದಂಧೆ, ಕಮಿಷನ್  ಪಡೆಯೋ ದಂಧೆಯಲ್ಲಿ ತೊಡಗಿದೆ ಎಂದು ದಿನೇಶ್ ಗುಂಡೂರಾವ್  ಆರೋಪಿಸಿದರು.

Key words: Ramesh jarackiholi –out -BJP – week -after – result-kpcc president-dinesh gundurao