ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಾಡಹಗಲೇ ಗುಂಡಿನ ದಾಳಿ ನಡೆಸಿ ಇಬ್ಬರ ಹತ್ಯೆ.

Promotion

ಚಿಕ್ಕಮಗಳೂರು,ಫೆಬ್ರವರಿ,20,2023(www.justkannada.in):   ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಹಾಡಹಗಲೇ  ಗುಂಡು ಹಾರಿಸಿ ಸವಾರರಿಬ್ಬರನ್ನ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರಿಲ್ಲಿ ನಡೆದಿದೆ.

ಬಾಳೆಹೊನ್ನೂರು ಬಳಿ ಚಂದ್ರುಳ್ಳಿಬಿದರೆ ಗ್ರಾಮದಲ್ಲಿ ಈ ಘಟನೆ ಡನೆದಿದೆ.  ಚಂದ್ರುಳ್ಳಿಬಿದರೆ ಗ್ರಾಮದ ಪ್ರಕಾಶ್, ಪ್ರವೀಣ್ ಮೃತರು. ಚಿಕ್ಕಮಗಳೂರು ತಾಲೂಕಿನ ಉಜ್ಜಯಿನಿ ಗ್ರಾಮದ ರಮೇಶ್​ ಎಂಬಾತನೇ  ಕೋವಿಯಿಂದ ಗುಂಡುಹಾರಿಸಿ ಹತ್ಯೆಗೈದಿದ್ದಾನೆ ಎನ್ನಲಾಗಿದೆ.

ಹತ್ಯೆಗೆ ಯಾವುದೇ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ​ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: firing-Two -people –  death- chikkamagalore