ರೈತನ ಜಮೀನಿನಲ್ಲಿ ಚಿರತೆ ಮರಿ ಪತ್ತೆ: ಅರಣ್ಯಾಧಿಕಾರಿಗಳ ವಶಕ್ಕೆ…

Promotion

ಮೈಸೂರು,ಫೆ,3,2020(www.justkannada.in):  ಹುಣಸೂರಿನ ರಾಮಪಟ್ಟದ ರಸ್ತೆ ಪಕ್ಕ ಮೂಕನಹಳ್ಳಿ ರವಿಪ್ರಸನ್ನ  ಎಂಬುವವರಿಗೆ ಸೇರಿದ ಜಮೀನಿನಲ್ಲಿ ಚಿರತೆ ಮರಿ ಪತ್ತೆಯಾಗಿದ್ದು ಚಿರತೆ ಮರಿಯನ್ನ ಅರಣ್ಯಾಧಿಕಾರಿಗಳಿಗೆ ಒಪ್ಪಿಸಲಾಗಿದೆ.

ಜೋಳದ ಹೊಲದಲ್ಲಿ ರೈತರು ಕೆಲಸ  ಮಾಡುತ್ತಿರುವಾಗ ಚಿರತೆ ಮರಿ ಪತ್ತೆಯಾಗಿದ್ದು ಮರಿಯನ್ನು ಕಂಡ ರೈತರು ಹಾಗೂ ಗ್ರಾಮಸ್ಥರು ಮರಿಯನ್ನು ಹಗ್ಗದಿಂದ ಕಟ್ಟಿ ಹಾಕಿ ನಂತರ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆರ್ ಎಫ್ ಓ ಸಂದಿತ್   ಡಿಆರ್ ಎಫ್ ಓ ರಿಜ್ವಾನ್ಮ ಹಮ್ಮದ್.ಪ್ಯಾರೇಜಾನ್ ಸತೀಶ್ ಮೂರು ತಿಂಗಳ ಚಿರತೆ ಮರಿಯನ್ನು ವಶಕ್ಕೆ ಪಡೆದು  ಸೂಕ್ತ ಚಿಕಿತ್ಸೆಯನ್ನು ನೀಡಿದ್ದಾರೆ .

ಇನ್ನೂ ಕೆಲ ಚಿರತೆ ಮರಿಗಳು ಇದೆ ಎಂದು  ಅರಣ್ಯಾಧಿಕಾರಿಗಳ ಬಳಿ  ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು,  ಹೀಗಾಗಿ ಅರಣ್ಯಾಧಿಕಾರಿಗಳು ಕುಚೇಲ ಎಂಬುವವರ ಜಮೀನಿನಲ್ಲಿ  ಬೋನು ಇಟ್ಟಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

Key words: Find – leopard – farmer- farm- hunsur-forest officer