ಕೊಯ್ಲಿಯ ‘ಅರ್ಧ ಶತಕ’ಗಳ ದಾಖಲೆ ಮುರಿದ ‘ಹಿಟ್ ಮ್ಯಾನ್’

ನವದೆಹಲಿ, ಫೆಬ್ರವರಿ 03, 2020 (www.justkannada.in): ರೋಹಿತ್ ಶರ್ಮ ಅರ್ಧಶತಕ ಸಿಡಿಸುವ ಮೂಲಕ ಭಾರತದ ರನ್ ಮೆಷಿನ್ ಹಾಗೂ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದ ಸಾಧನೆ ಮಾಡಿದರು.

ರೋಹಿತ್ ಶರ್ಮ 41 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ ಸೇರಿದಂತೆ 60 ರನ್ ಬಾರಿಸಿ ವೃತ್ತಿಜೀವನದ 25ನೇ ಅರ್ಧಶತಕದ ದಾಖಲೆ ಬರೆದರು. ಈ ಮೂಲಕ ಟಿ-20ಯಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಕೊಹ್ಲಿ ದಾಖಲೆಯನ್ನು ಹಿಂದಿಕ್ಕಿದರು.

ವಿರಾಟ್ ಕೊಹ್ಲಿ 24 ಅರ್ಧಶತಕ ಬಾರಿಸಿದ್ದರು. ಆದರೆ ಪ್ರಯೋಗದ ಕಾರಣ ಈ ಪಂದ್ಯದಿಂದ ಹೊರಗುಳಿದು ರೋಹಿತ್ ಶರ್ಮ ಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಿದ್ದರು.