ಯುಎಸ್ ಒಪೆನ್: ಕ್ವಾರ್ಟರ್ ಫೈನಲ್ಸ್’ನಲ್ಲಿ ಎಡವಿದ ಫೆಡರರ್

Promotion

ನ್ಯೂಯಾರ್ಕ್, ಸೆಪ್ಟೆಂಬರ್ 04, 2019 (www.justkannada.in): ಐದು ಬಾರಿಯ ಚಾಂಪಿಯನ್ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಪ್ರತಿಷ್ಠಿತ ಅಮೆರಿಕನ್ ಓಪನ್ ಟೆನಿಸ್ ಟೂರ್ನಮೆಂಟ್‌ನಿಂದ ನಿರ್ಗಮಿಸಿದ್ದಾರೆ.

ಪುರುಷರ ಸಿಂಗಲ್ಸ್​ನ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಫೆಡರರ್ ಮೂರನೇ ಶ್ರೇಯಾಂಕಿತ ಫೆಡರರ್ ಅವರು 78ನೇ ರ್ಯಾಂಕಿನ ಬಲ್ಗೇರಿಯಾದ ಗ್ರಿಗೋರ್ ಡಿಮಿಟ್ರೋವ್ ವಿರುದ್ಧ 6-3, 4-6, 6-3, 4-6, 2-6 ಸೆಟ್​ಗಳಿಂದ ಸೋತಿದ್ದಾರೆ.

ದಾಖಲೆಯ ಮಟ್ಟದಲ್ಲಿ 20 ಗ್ರ್ಯಾನ್ ಸ್ಲಾಮ್ ಗೆದ್ದ ಸಾಧನೆ ಮಾಡಿರುವ ಫೆಡರರ್‌ 11 ವರ್ಷಗಳ ಬಳಿಕ ಅಮೆರಿಕನ್ ಓಪನ್ ಪ್ರಶಸ್ತಿ ಗೆಲ್ಲುವಲ್ಲಿ ಮತ್ತೆ ವಿಫಲವಾಗಿದ್ದಾರೆ.