ರೈತರಿಗೆ ಉಪಯೋಗವಿಲ್ಲ ಕೇಂದ್ರ ಬಜೆಟ್ : ರೈತಮುಖಂಡ ಕುರುಬೂರು ಶಾಂತಕುಮಾರ್ ಅಸಮಾಧಾನ

Promotion

ಮೈಸೂರು,ಜನವರಿ,01,2021(www.justkannada.in) : ಕೇಂದ್ರದ ಬಜೆಟ್ ನಲ್ಲಿ ರೈತರಿಗೆ ಯಾವುದೇ ಅನುಕೂಲವಿಲ್ಲ. ಕೇಂದ್ರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಈ ಬಜೆಟ್ ರೈತರಿಗೆ ಉಪಯೋಗವಿಲ್ಲ  ಎಂದು ರೈತಮುಖಂಡ ಕುರುಬೂರು ಶಾಂತಕುಮಾರ್ ಅಸಮಾಧಾನವ್ಯಕ್ತಪಡಿಸಿದ್ದಾರೆ.jkಬಜೆಟ್ ಕುರಿತು ಮಾತನಾಡಿದ ಅವರು, ರೈತರಿಗೆ ಬೆಂಬಲ ಬೆಲೆ ನೀಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೆ, ಇದರ ಮಾನದಂಡಗಳೇ ಸರಿಯಿಲ್ಲ. ಮೊದಲು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ಸ್ ಪಡೆಯಬೇಕು ಎಂದು ಕಿಡಿಕಾರಿದ್ದಾರೆ.farmers,No use,Center,Budget,farmer,Leader, Kuruburu Shanthakumar,Upset

ಈ ಹಿಂದೆಯೂ ರೈತರ ಆದಾಯ ದ್ವಿಗುಣ ಮಾಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಅಂತಹ ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಇದೊಂದು ನಿರಾಶಾದಾಯಕ ಬಜೆಟ್.  ರೈತಮುಖಂಡ ಕುರುಬೂರು ಶಾಂತಕುಮಾರ್ ಬೇಸರವ್ಯಕ್ತಪಡಿಸಿದ್ದಾರೆ.

key words : farmers-No use-Center-Budget-farmer-Leader
Kuruburu Shanthakumar-Upset