“ಆಯುಷ್ಮಾನ್ ಆರೋಗ್ಯ ಕಾರ್ಡ್ ಸೌಲಭ್ಯ, ಗ್ರಾಮಾಂತರ ಪತ್ರಕರ್ತರಿಗೂ ವಿಸ್ತರಿಸಿ” : ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮನವಿ

ಬೆಂಗಳೂರು,ಜನವರಿ,01,2021(www.justkannada.in) : ಆಯುಷ್ಮಾನ್ ಆರೋಗ್ಯ ಕಾರ್ಡ್ ಸೌಲಭ್ಯ ಸರ್ಕಾರದ ಮಾನ್ಯತೆ ಪಡೆದ ಪರ್ತಕರ್ತರಿಗೆ ಕೊಡುತ್ತಿರುವುದು ಶ್ಲಾಘನೀಯ. ಹಾಗೆಯೇ ತಾಲ್ಲೂಕು ಮಟ್ಟದ ಗ್ರಾಮಾಂತರ ಪತ್ರಕರ್ತರಿಗೂ ವಿಸ್ತರಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದ್ದಾರೆ.jkವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೂತನ ಸಚಿವ ಸಿ.ಸಿ.ಪಾಟೀಲ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗ ಸೋಮವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ ಅಭಿನಂದಿಸಿತು.

ಶಿವಾನಂದ ತಗಡೂರು ಅವರ ಮನವಿ ಸ್ವೀಕರಿಸಿ, ಸ್ಪಂದಿಸಿದ ಸಚಿವರು, ತಾಲ್ಲೂಕು ಮಟ್ಟದ ಪತ್ರಕರ್ತರಿಗೂ ಈ ಸೌಲಭ್ಯ ಸಿಗಲೇಬೇಕು. ಈ ನಿಟ್ಟಿನಲ್ಲಿ ಶೀಘ್ರವೇ ಈ ಸಂಬಂಧ ಆದೇಶ ನೀಡುವುದಾಗಿ ಭರವಸೆ ನೀಡಿದರು.Ayushman,Health,Card,Facility,countryside,journalists,well,Expand,State,executive,Journalists,Association,President,Shivananda Tagadur,Appeal

ನಿಯೋಗದಲ್ಲಿ ರಾಜ್ಯ ಸಂಘದ ಕಾರ್ಯದರ್ಶಿ ಸಂಜೀವರಾವ್ ಕುಲಕರ್ಣಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಮೈಸೂರಿನ ಎಂ.ಆರ್.ಸತ್ಯನಾರಾಯಣ, ಕಲಬುರ್ಗಿ ಸಂಘದ ಅಧ್ಯಕ್ಷ ಭವಾನಿ ಸಿಂಗ್ ಠಾಕೂರ್, ಸಮಿತಿ ಸದಸ್ಯರಾದ ದೇವೇಂದ್ರಪ್ಪ ಕಪನೂರ್, ಜಿಲ್ಲಾ ಖಜಾಂಚಿ ರಾಜೀವ್ ದೇಶಮುಖ್, ಉತ್ತರ ಕನ್ನಡದ ಜಿ.ಸುಬ್ರಾಯ ಭಟ್ ಬಕ್ಕಳ ಇತರರು ಇದ್ದರು.

key words : Ayushman-Health-Card-Facility-countryside-journalists-well-Expand-State-executive-Journalists-Association-President-Shivananda Tagadur-Appeal