ರಾಮಮಂದಿರ ದೇಣಿಗೆ ಸಂಗ್ರಹದ ವಿವರ ಬಹಿರಂಗಪಡಿಸುವಂತೆ ರೈತಮುಖಂಡ ಬಡಗಲಪುರ ನಾಗೇಂದ್ರ ಒತ್ತಾಯ.

Promotion

ಮೈಸೂರು,ಜೂನ್,22,2021(www.justkannada.in): ರಾಮಮಂದಿರ ದೇಣಿಗೆ ಹಣದಲ್ಲಿ ಅವ್ಯವಹಾರವಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಮಮಂದಿರ ದೇಣಿಗೆ ಸಂಗ್ರಹದ ವ್ಯವಹಾರ ಬಹಿರಂಗಪಡಿಸುವಂತೆ  ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದ್ದಾರೆ.jk

ಈ ಕುರಿತು ಮಾತನಾಡಿರುವ ರೈತಮುಖಂಡ ಬಡಗಲಪುರ ನಾಗೇಂದ್ರ, ಭಕ್ತಿ, ಗೌರವ ಭಾವನೆಯಿಂದ ಹಲವಾರು ಜನರು ದೇಣಿಗೆ ನೀಡಿದ್ದಾರೆ. ಈ ದೇಣಿಗೆ ಹಣ ಅವ್ಯವಹಾರವಾಗಿದೆ ಎಂದು ಆರೋಪಗಳು ಕೇಳಿಬರುತ್ತಿವೆ. ದೇಣಿಗೆ ಹಣದ ವ್ಯವಹಾರಗಳ ಬಗ್ಗೆ ಸಾರ್ವಜನಿಕವಾಗಿ ಪ್ರಕಟಿಸಬೇಕು. ರಾಮಮಂದಿರ ಟ್ರಸ್ಟ್ ನಿಂದ ದೇಣಿಗೆಯ ಸಮಗ್ರ ಮಾಹಿತಿ ಹೊರಬರಬೇಕು ಎಂದು ಆಗ್ರಹಿಸಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ಸಾಮಾನ್ಯ ಜನರಿಂದ ದೊಡ್ಡ ವ್ಯಾಪಾರಸ್ಥರವರೆಗೆ ದುಡಿಮೆಯ ಹಣವನ್ನ ನೀಡಿದ್ದಾರೆ. ದೇಣಿಗೆ ಹಣ ಅವ್ಯವಹಾರವಾಗಿರುವುದು ನಿಜವಾಗಿದ್ದರೆ, ರಾಮನ ಭಕ್ತರೆಂದು ಹೇಳಿಕೊಂಡು ದೇಣಿಗೆ ಸಂಗ್ರಹ  ಮಾಡಿರುವವರು ರಾಮನ ವಿರೋಧಿಗಳಾಗಿರುತ್ತಾರೆ. ಈ ಕಾರಣಗಳಿಂದ ಲೆಕ್ಕ ಪತ್ರದ ಮೂಲಕ ಸಾರ್ವಜನಿಕರ ಗಮನಕ್ಕೆ ತರಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ  ಒತ್ತಾಯಿಸಿದರು.

Key words: farmer leader-Badagalpura Nagendra- demands – expose -collection –rama madir-donations.