ಸ್ಮಾರಕ ಅಭಿಮಾನಿಗಳಿಗೆ ನೆಮ್ಮದಿ‌ ನೀಡುವ ತಾಣವಾಗುತ್ತೆ- ಡಾ.ವಿಷ್ಣು ಹುಟ್ಟುಹಬ್ಬ ಹಿನ್ನೆಲೆ, ಪೂಜೆ ಸಲ್ಲಿಸಿ ನಟಿ ಭಾರತಿ ವಿಷ್ಣುವರ್ಧನ್ ಹೇಳಿಕೆ…

ಮೈಸೂರು,ಸೆ,18,2019(www.justkannada.in): ಡಾ.ವಿಷ್ಣು ಸ್ಮಾರಕ ಆಗಲೇಬೇಕು. ಆಗುವ ನಂಬಿಕೆ ಇದೆ. ಆದರೆ ಎಲ್ಲದಕ್ಕೂ ಭಗವಂತನ ಇಚ್ಚೆ. ಬಹಳಷ್ಟು ದಿನಗಳಿಂದ ಕಾಯುತ್ತಿದ್ದೇವೆ. ಸ್ಮಾರಕ ಅಭಿಮಾನಿಗಳಿಗಾಗಿ ಆಗಬೇಕು ಡಾ.ವಿಷ್ಣು ಸ್ಮಾರಕ ಅಭಿಮಾನಿಗಳಿಗೆ ನೆಮ್ಮದಿ‌ ನೀಡುವ ತಾಣವಾಗುತ್ತದೆ ಎಂದು ಹಿರಿಯ ನಟಿ ಭಾರತಿ ವಿಷ್ಣು ವರ್ಧನ್ ಹೇಳಿದರು.

ಇಂದು ನಟ ದಿ.ಡಾ. ವಿಷ್ಣುವರ್ಧನ್ ಹುಟ್ಟುಹಬ್ಬ ಹಿನ್ನೆಲೆ. ಮೈಸೂರಿನ ಉದ್ಬೂರು ಬಳಿಯ ವಿಷ್ಣು ಸ್ಮಾರಕ ನಿಯೋಜಿತ ಸ್ಥಳದಲ್ಲಿ ಸಂಭ್ರಮ ಮನೆ ಮಾಡಿತ್ತು. ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುಧ್, ಮಗಳು ಕೀರ್ತಿ ಸ್ಮಾರಕ ಸ್ಥಳಕ್ಕೆ ಪೂಜೆ ಸಲ್ಲಿಸಿ ಹುಟ್ಟುಹಬ್ಬ ಆಚರಿಸಿದರು. ಈ ವೇಳೆ ನೂರಾರು ಅಭಿಮಾನಿಗಳು ಸಾಥ್ ನೀಡಿದರು.

ಡಾ.ವಿಷ್ಣು ವರ್ಧನ್ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಗಳು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿದರು. ಅಲ್ಲದೆ ಡಾ.ವಬಿಷ್ಣು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ವಿಷ್ಣು ಅವರ ನೆನಪಿನಾರ್ಥ  69 ಗಿಡಗಳನ್ನು ನೆಟ್ಟರು. ವಿಷ್ಣು ಸ್ಮಾರಕದ ಪೂರ್ಣ ಸ್ಚರೂಪ ಇತಿಹಾಸ ಸೃಷ್ಟಿಸುತ್ತೆ. ಅಭಿಮಾನಿಗಳಿಗೆ ನೆಮ್ಮದಿ‌ ನೀಡುವ ತಾಣವಾಗುತ್ತೆ. ಪ್ರತೀ ವರ್ಷ ಇದೇ ಸ್ಥಳದಲ್ಲಿ ನಾವು ನೀವು ಇಬ್ಬರೂ ಸೇರೋಣ. ಈ ಸ್ಥಳದಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ, ಚಿತ್ರಕ್ಕೆ ಅವರ ಅಶೀರ್ವಾದ ಇರುತ್ತೆ ಎಂದರು.

ಮಾವುತರು ಕಾವಾಡಿಗಳ ಮಕ್ಕಳ ಜತೆ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆ

ನಟಿ ಭಾರತೀ ವಿಷ್ಣುವರ್ಧನ್  ಅವರು ದಸರೆಗಾಗಿ ಅರಮನೆಗೆ ಆಗಮಿಸರುವ ಮಾವುತರು ಹಾಗೂ ಕಾವಾಡಿಗಳ ಮಕ್ಕಳ ಜೊತೆ ವಿಷ್ಣು ಜನ್ಮದಿನವನ್ನ ಆಚರಣೆ ಮಾಡಿದರು. ಮಕ್ಕಳೋಂದಗೆ ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿದರು. ಇವರಿಗೆ ಅಳಿಯ ಅನಿರುದ್ಧ್ ಹಾಗೂ ಮಗಳು ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ನಟಿ  ಭಾರತೀ ವಿಷ್ಣು ವರ್ಧನ್ , ಮಕ್ಕಳೋಂದಿಗೆ ವಿಷ್ಟು ಅವರ ಜನ್ಮದಿನ ಆಚರಣೆ ಮಾಡುತ್ತಿರುವುದು ಖುಷಿ ನೀಡಿದೆ. ಕಳೆದ 10 ವರ್ಷಗಳ ಹೋರಾಟದ ನಂತರ ಈಗಾ ಮೈಸೂರಿನಲ್ಲಿ ಸ್ಮಾರಕವಾಗುತ್ತಿದೆ. ವಿಷ್ಣು ಯಾವಾಗಲು ಅಭಿಮಾನಿಗಳನ್ನ ಹೆಚ್ಚು ಇಷ್ಟ ಪಡುತ್ತಿದ್ದರು. ಅಭಿಮಾನಿಗಳ ಜೊತೆ ಜನ್ಮದಿನ ಆಚರಣೆ ಮಾಡುವುದು ಖುಷಿ ನೀಡುತ್ತಿದೆ. ಇನ್ನೂ ಎರಡು ವರ್ಷದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ತಯಾರಿ ನಡೆದಿದೆ ಎಂದು ತಿಳಿಸಿದರು.

ಬಳೀಕ ಅಳಿಯ ಅನಿರುದ್ಧ್  ಮಾತನಾಡಿ, ಇದು ಕೇವಲ ಪುತ್ಥಳಿಗೆ, ಸ್ಮಾರಕಕ್ಕೆ ಸೀಮಿತ ಆಗಬಾರದು. ಚಿತ್ರೋತ್ಸವ, ನಾಟಕೋತ್ಸವ ನಿರಂತರ ನಡೆಯಬೇಕು. ಇದೊಂದು ಮಾದರಿ ಸ್ಮಾರಕ ಆಗಬೇಕೆಂಬುದು‌ ನಮ್ಮೆಲ್ಲರ ಆಶಯ. ಅಪ್ಪಾಜಿಯವರ ಪ್ರತಿಮೆ ನಿಲ್ಲಿಸಿ ಏಕಾಂಗಿ ಮಾಡೋದು ಇಷ್ಟವಿಲ್ಲ. ಇಲ್ಲಿ ಉಚಿತ ಆರೋಗ್ಯ ಶಿಬಿರಗಳು ಈಗಿನಿಂದಲೇ ಆರಂಭವಾಗಲಿದೆ.  ಐದೂವರೆ ಎಕರೆ ಜಾಗದಲ್ಲಿ 11 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣವಾಗುತ್ತೆ. ಇಲ್ಲಿ‌ ಒಂದು ಫಿಲಂ‌ ಇನ್ಸ್ ಟ್ಯೂಟ್ ಕೂಡ ಆಗಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಕಾರದೊಡನೆ ಎಲ್ಲಾ ಆಶಯಗಳನ್ನು ಈಡೇರಿಸುತ್ತೇವೆ ಎಂದು ಅನಿರುದ್ಧ್ ಹೇಳಿದರು.

ಸ್ಮಾರಕ ನಿರ್ಮಾಣದ ರೂಪುರೇಷೆಗಳು ಸಿದ್ದಗೊಳ್ಳುತ್ತಿದೆ. ಸುಮಾರು 5ವರೆ ಎಕರೆಯಲ್ಲಿ ಸ್ಮಾರಕ ಸಿದ್ದಗೊಳ್ಳಲಿದೆ. ಇದರಲ್ಲಿ ಎರಡು ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು. ಈ ಸ್ಮಾರಕದಲ್ಲಿ ಅಪ್ಪಾಜಿಯವರ ವಿಭೂತಿಯೂ ಸಹ ಇರಲಿದೆ. ಈ ಒಂದು ಸ್ಮಾರಕ ಪೂಜಾ ಸ್ಥಳ ಆಗುತ್ತೆ ಹಾಗೂ ಶೈಕ್ಷಣಿಕ ಸ್ಥಳ ಆಗುತ್ತೆ. ದೇಶದಲ್ಲೇ ಒಂದು ಮಾದರಿ ಸ್ಮಾರಕವಾಗಿ ಇದು ರೂಪುಗೊಳ್ಳಲಿದೆ. ಸರ್ಕಾರ ಇದಕ್ಕೆ 11 ಕೋಟಿ ರೂಪಾಯಿ ಮಂಜೂರು ಮಾಡಿದೆ. ಇದು ಜನರ ದುಡ್ಡು, ಇದು ಜನರಿಗಾಗಿಯೇ ಉಪಯೋಗವಾಗಬೇಕು ಎಂದು ಅಳಿಯ ಅನಿರುದ್ ಹೇಳಿದರು.

ಮೈಸೂರಿನ ಕಲಾವಿದನಿಂದ ವಿನೂತನವಾಗಿ ಡಾ.ವಿಷ್ಣು ಅವರ ಜನ್ಮದಿನ ಆಚರಣೆ…

ಅಭಿನಯ ಚಕ್ರವರ್ತಿ ಡಾ.ವಿಷ್ಣುವರ್ಧನ್ ಜನ್ಮ ದಿನ ಹಿನ್ನಲೆ. ಮೈಸೂರಿನ ಕಲಾವಿದ ಕಲಾವಿದ ಅರ್ಜುನ್ ಆರ್ಯ  ಎಂಬುವವರು ವಿನೂತನವಾಗಿ ಜನ್ಮದಿನ ಆಚರಿಸಿದರು.

ರಸ್ತೆ ಬದಿಯಲ್ಲಿ ನಿಂತು  ವಿಷ್ಣು ಅವರ ವರ್ಣಚಿತ್ರವನ್ನ ಕಲಾವಿದ ಅರ್ಜುನ್ ಆರ್ಯ ರಚನೆ ಮಾಡಿದರು. ಕಲಾವಿದನ ಕುಂಚದಲ್ಲಿ ಅರಳಿದ ವರ್ಣ ಚಿತ್ರ ಕಂಡು ಸಾರ್ವಜನಿಕರು ಖುಷ್ ಆದರು.  ಸ್ಥಳದಲ್ಲೇ ರಚನೆಯಾದ ಚಿತ್ರ ಕಂಡು ಅಭಿಮಾನಿಗಳು ಹೂವಿನ ಹಾರ ತಂದು ಹಾಕಿ ಸಂಭ್ರಮಿಸಿದರು.

ಈ ಬಗ್ಗೆ ಮಾತನಾಡಿದ ಕಲಾವಿದ ಅರ್ಜುನ್ ಆರ್ಯ,  ದಾದಾರ ಸ್ಮಾರಕ ಈಗಾ ಮೈಸೂರಿನಲ್ಲೇ ಆಗುತ್ತಿರುವುದು ಖುಷಿ ನೀಡಿದೆ. ಆದ್ರೇ ಅವರು ನಮ್ಮಿಂದ ದೂರವಾಗಿರುವುದು ಬೇಸರ ಮೂಡಿಸಿದೆ. ದಾದಾ ಇಲ್ಲದಿರುವುದಕ್ಕೆ ಕನ್ನಡ ಚಿತ್ರರಂಗ ನಾಯಕನಿಲ್ಲದ ಗೂಡಾಗಿದೆ. ಈಗಾಗಿ ಕನ್ನಡ ಚಿತ್ರರಂಗದಲ್ಲಿ ಮನಃಸ್ತಾಪಗಳು ಹೆಚ್ಚಾಗುತ್ತಿದೆ. ಖಾಲಿಯಾಗಿರುವ ಸ್ಥಾನ ತುಂಬಲು ಸೂಕ್ತ ನಾಯಕ ಬರಬೇಕಿದೆ ಎಂದರು.

Key words: fans-mysore – Dr.Vishnu Vardhan—Birthday-Bharathi Vishnuvardhan’s – Worship