ಖ್ಯಾತ ಬಾಲಿವುಡ್ ಗಾಯಕ ಭೂಪಿಂದರ್ ಸಿಂಗ್ ನಿಧನ

Promotion

ಬೆಂಗಳೂರು, ಜುಲೈ 19, 2022 (www.justkannada.in): ಖ್ಯಾತ ಬಾಲಿವುಡ್ ಗಾಯಕ ಭೂಪಿಂದರ್ ಸಿಂಗ್ (82) ನಿಧನರಾಗಿದ್ದಾರೆ.

ನಿನ್ನೆ ಸಂಜೆ ಮುಂಬೈನಲ್ಲಿ ಭೂಪಿಂದರ್ ಸಿಂಗ್ ಕೊನೆಯುಸಿರೆಳೆದರು ಎಂದು ಅವರ ಪತ್ನಿ ಮತ್ತು ಗಾಯಕಿ ಮಿತಾಲಿ ಸಿಂಗ್ ಹೇಳಿದ್ದಾರೆ.

ಭೂಪಿಂದರ್ ಅವರ ನಿಧನಕ್ಕೆ ಬಾಲಿವುಡ್‌ ಹಾಗೂ ಸಂಗೀತ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಭೂಪಿಂದರ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಮಿಥಾಲಿ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ಭೂಪಿಂದರ್ ಸಿಂಗ್ ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ. ಭೂಪಿಂದರ್ ಸಾವಿನ ಸುದ್ದಿಗೆ ಅಭಿಮಾನಿಗಳೂ ಸಂತಾಪ ವ್ಯಕ್ತಪಡಿಸಿದ್ದಾರೆ.