Promotion
ಬೆಂಗಳೂರು,ನವೆಂಬರ್,15,2020(www.justkannada.in) : ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ನಟ ವಿನೋದ್ ರಾಜ್ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಅಶ್ಲೀಲ ಫೋಟೋ ಅಪ್ಲೋಡ್ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ವಿಷಯ ಕುರಿತಂತೆ ದುಷ್ಕರ್ಮಿಗಳ ವಿರುದ್ಧ ಉತ್ತರ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದುಷ್ಕರ್ಮಿಗಳ ವಿರುದ್ಧ ನಟ ವಿನೋದ್ ರಾಜ್ ದೂರು ದಾಖಲು
ಕಿಡಿಗೇಡಿಗಳು ಫೇಸ್ಬುಕ್ ನಲ್ಲಿ ವಿನೋದ್ ರಾಜ್ ಅವರ ಹೆಸರಲ್ಲಿ ನಕಲಿ ಖಾತೆ ತೆರೆದಿದ್ದು ಅಶ್ಲೀಲ ಫೋಟೋಗಳನ್ನು ಅಪ್ಲೋಡ್ ಮಾಡಿ, ಅಸಭ್ಯ ಬರಹ ಪ್ರಕಟಿಸುತ್ತಿದ್ದಾರೆ ಎಂದು ನಟ ವಿನೋದ್ ರಾಜ್ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
key words : fake-Facebook-account-Upload-porn-photo-Actor-Vinod Raj-files-complaint