ಹೊಸ ವರ್ಷಾಚರಣೆಗೆ ನಮ್ಮ ಮೇಟ್ರೋ ಸಂಚಾರದ ಅವಧಿ ವಿಸ್ತರಣೆ.

Promotion

ಬೆಂಗಳೂರು,ಡಿಸೆಂಬರ್,29,2022(www.justkannada.in): ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಮ್ಮ ಮೇಟ್ರೋ ಸಂಚಾರದ ಅವಧಿಯನ್ನ ಬಿಎಂಆರ್ ಸಿಎಲ್  ವಿಸ್ತರಣೆ ಮಾಡಿದೆ.

ಡಿಸೆಂಬರ್ 31ರಂದು ರಾತ್ರಿ 3 ಗಂಟೆ ಮೆಟ್ರೋ ಸಂಚಾರ ಅವಧಿಯನ್ನು ಬಿಎಂಆರ್​ಸಿಎಲ್ ವಿಸ್ತರಿಸಿದೆ. ಜನವರಿ 1ರ ಬೆಳಗಿನ ಜಾವ 2 ಗಂಟೆವರೆಗೂ ನಮ್ಮ ಮೆಟ್ರೋ ಸಂಚಾರವನ್ನ ವಿಸ್ತರಿಸಿದೆ. ಕೊನೆಯ ನಮ್ಮ ಮೆಟ್ರೋ ಸಂಚಾರ ರಾತ್ರಿ 2 ಗಂಟೆಗೆ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ನಾಲ್ಕು ದಿಕ್ಕಿಗೆ ಹೊರಡಲಿದೆ. ಜನವರಿ 1 ರಂದು ಎಂದಿನಂತೆ 5.30 ಕ್ಕೆ ಮೆಟ್ರೋ ಸಂಚಾರ ಆರಂಭವಾಗಲಿದೆ.

ಹೊಸ ವರ್ಷಾಚರಣೆ ಹಿನ್ನಲೆ ಎಂ.ಜಿ ರೋಡ್ ಬೈಯಪ್ಪನಹಳ್ಳಿ ಕಡೆಯಿಂದ ಸಂಚಾರ ಮಾಡುವ ಪ್ರಯಾಣಿಕರು ಮೆಟ್ರೋ ಬಳಕೆ ಮಾಡುವಂತೆ  ಬಿಎಂಆರ್ ಸಿಎಲ್ ಎಂ.ಡಿ ಅಂಜುಂ ಪರ್ವೇಜ್  ಮನವಿ ಮಾಡಿದ್ದಾರೆ.

Key words: Extension – Namma metro-service – New Year