ಸಿದ್ಧರಾಮಯ್ಯ ಸಿಡಿ ಮಾಡುವುದರಲ್ಲಿ ಎಕ್ಸ್ ಪರ್ಟ್: ಆಡಿಯೋ ತಿರುಚಿ ರಿಲೀಸ್ ಮಾಡಿದ್ದಾರೆ -ಡಿಸಿಎಂ ಲಕ್ಷ್ಮಣ್ ಸವದಿ ಕಿಡಿ…

Promotion

ಹುಬ್ಬಳ್ಳಿ,ನ,5,2019(www.justkannada.in): ಮಾಜಿ  ಸಿಎಂ ಸಿದ್ದರಾಮಯ್ಯ ಸಿಡಿ ಮಾಡಿಸುವುದರಲ್ಲಿ ಎಕ್ಸ್ ಪರ್ಟ್ ಆಗಿದ್ದಾರೆ. ಇವರು ಎರಡು ಸಿಡಿ ಮಾಡಿಸಿದ ಉದಾಹರಣೆಯಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಕಿಡಿಕಾರಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಸಿದ್ಧರಾಮಯ್ಯ ಎರಡು ಭಾರಿ ಸಿಡಿ ಮಾಡಿಸಿದ ಉದಹಾರಣೆ ಇದೆ.  ಒಂದು ಬಾರಿ ಬಿಎಸ್‌ವೈ ಜೊತೆ ಲಿಂಗಾಯತರು ಇಲ್ಲ ಎನ್ನುವ ಆಡಿಯೋ ಮಾಡಿಸಿದರು.  ಇನ್ನೊಂದು ಲೋಕಸಭೆಯ ನಂತರ ಮೈತ್ರಿ ಸರ್ಕಾರ ಬೀಳುತ್ತೆ ಎಂದು ಭವಿಷ್ಯ ನುಡಿದು ಸಿಡಿ ಮಾಡಿಸಿದರು. ಸಿದ್ಧರಾಮಯ್ಯ ಮೊದಲು ಸುಳ್ಳು ಹೇಳುವುದನ್ನು ಬಿಡಲಿ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರ ಈ ವರ್ತನೆ ಅವರ ಘನತೆಗೆ ಸರಿಯಾದದ್ದು ಅಲ್ಲ. ಅಂದಿನ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನರ್ಹಗೊಂಡ ಶಾಸಕರಿಂದಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ ಎಂದರಷ್ಟೇ. ಅನರ್ಹರ ಬಗ್ಗೆ ಹಗುರವಾಗಿ ಮಾತನಾಡಬಾರದೆಂದು ಯಡಿಯೂರಪ್ಪ ಹೇಳಿದ್ದು ನಿಜ. ಆದರೆ ಅವರ ಆಡಿಯೋವನ್ನು ತಿರುಚಿ ಬಿಡುಗಡೆ ಮಾಡಲಾಗಿದೆ ಎಂದು  ಲಕ್ಷ್ಮಣ್ ಸವದಿ ತಿಳಿಸಿದರು.

ಇನ್ನು ನಾನು ಬಿಜೆಪಿ ಹೈಕಮಾಂಡ್‌ಗೆ ನಿಷ್ಠನಾಗಿ ಇರುವ ವ್ಯಕ್ತಿ. ವಿಧಾನಸಭೆಗೆ ಸ್ಪರ್ಧಿಸುವಂತೆ ಸೂಚಿಸಿದರೇ ವಿಧಾನಸಭೆಗೆ ಸ್ಪರ್ಧಿಸುತ್ತೇನೆ.  ಪರಿಷತ್‌ಗೆ ಸೂಚಿಸಿದರೆ ಅಲ್ಲಿಯೇ ಸ್ಪರ್ಧೆ ಮಾಡುತ್ತೇನೆ ಎಂದು ಲಕ್ಷ್ಮಣ್ ಸವದಿ ಹೇಳಿದರು.

Key words: Expert – Siddaramaiah –CD-DCM- Laxman Savadi