ಸಿಎಂ ಬಿಎಸ್ ವೈ ಆಡಿಯೋಗೆ ಪುರಾವೆ ಇಲ್ಲ: ಅನರ್ಹರ ಪ್ರಕರಣಕ್ಕೆ ಪರಿಣಾಮ ಬೀರಲ್ಲ- ಸಚಿವ ಜಗದೀಶ್ ಶೆಟ್ಟರ್…

ನವದೆಹಲಿ,ನ,5,2019(www.justkannada.in):  ಆಪರೇಷನ್ ಕಮಲ  ಕುರಿತು ಸಿಎಂಬಿ.ಎಸ್.ಯಡಿಯೂರಪ್ಪ ಅವರದ್ದೆನ್ನಲಾದ ಆಡಿಯೋಗೆ ಯಾವುದೇ ಪುರಾವೆಗಳಿಲ್ಲ, ಹೀಗಾಗಿ ಈ ಆಡಿಯೋ ಅನರ್ಹ ಶಾಸಕರ ಪ್ರಕರಣಕ್ಕೆ ಪರಿಣಾಮ ಬೀರಲ್ಲ ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ನವದೆಹಲಿಯಲ್ಲಿ ಇಂದು ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್,  ಬಿಎಸ್ ವೈ ಆಡಿಯೋ ಮೂಲವನ್ನು ಯಾರೂ ಒಪ್ಪಿಕೊಂಡಿಲ್ಲ. ಅದಕ್ಕೆ ಸಾಕ್ಷಿಯೂ ಇಲ್ಲ.  ಹೀಗಾಗಿ ಸುಪ್ರೀಂಕೋರ್ಟ್ ಇದನ್ನು ಸಾಕ್ಷಿಯಾಗಿ ಪರಿಗಣಿಸುವುದಿಲ್ಲ.  ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹಾಗೆಯೇ ಈ ಆಡಿಯೋವನ್ನು ತಿರುಚಲಾಗಿದೆ ಎಂದು ಸಿಎಂ ಬಿಎಸ್ ವೈ ಅವರೇ ಹೇಳಿದ್ದಾರೆ. ಇದಕ್ಕೆ ಯಾವುದೇ ನಿಖರ ಸಾಕ್ಷಿಯಿಲ್ಲ. ಹಾಗೇನಾದ್ರು ಇದ್ದರೆ, ಕಾಂಗ್ರೆಸ್ ಗಟ್ಟಿತನದಿಂದ ತಾರ್ಕಿಕ ಅಂತ್ಯ ಕಾಣಿಸಲಿ ಎಂದು ಸಿದ್ದರಾಮಯ್ಯಗೆ ಸಚಿವ ಜಗದೀಶ್ ಶೆಟ್ಟರ್ ಸವಾಲು ಹಾಕಿದರು.

ಬಿಜೆಪಿಯಲ್ಲಿನ ಒಗ್ಗಟ್ಟು ಒಡೆಯಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾ. ಆದರೆ ಬಿಜೆಪಿಯನ್ನ ಒಡೆಯಲು ಸಿದ್ಧರಾಮಯ್ಯಗೆ ಸಾಧ್ಯವಿಲ್ಲ ಎಂದು ಜಗದೀಶ್ ಶೆಟ್ಟರ್  ಟಾಂಗ್ ನೀಡಿದರು.

Key words: no proof -CM BS Yeddyurappa- Audio-Minister -Jagdish Shetter