ದಲಿತ ಸಿಎಂ ಚರ್ಚೆ ಮುನ್ನಲೆಗೆ ಬರಲು ನಾನೇ ಕಾರಣ ಎಂದ ಡಾ.ಜಿ. ಪರಮೇಶ್ವರ್

Promotion

ಬೆಂಗಳೂರು, ನವೆಂಬರ್ 14, 2021 (www.justkannada.in): ನಾನು ಸಿಎಂ ಆಗಬಹುದು. ಆಗದೇ ಇರಬಹುದು. ಈ ಮಾತನಿಂದ ದಲಿತ ಸಿಎಂ ಬಗ್ಗೆ ಚರ್ಚೆ ಶುರುವಾಗಿದೆ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಪರಮೇಶ್ವರ್ ಅವರು ದಲಿತ ಸಿಎಂ ಕುರಿತ ಈ ಹೇಳಿಕೆ ಮಹತ್ವದ ಪಡೆದುಕೊಂಡಿದೆ.

ತುಮಕೂರಿನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್, ರಾಹುಲ್ ಗಾಂಧಿ ನನಗೆ ಏನಾಗಬೇಕು ಎಂದು ಕೇಳಿದ್ದರು. ತಕ್ಷಣ ನಾನು ಸಿಎಂ ಆಗಬೇಕು ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.

ಈ ಮಾತನಿಂದ ದಲಿತ ಸಿಎಂ ಬಗ್ಗೆ ಚರ್ಚೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ಅದೃಷ್ಟ ಯಾರಿಗೆ ಬರುತ್ತೆ ನೋಡಣ ಎಂದಿದ್ದಾರೆ.