ಬೆಂಗಳೂರಿನಲ್ಲಿ ‘ಇನ್ನೋವೇಶನ್ ಎಕ್ಸ್ಪೀರಿಯನ್ಸ್ ಸೆಂಟರ್’ ಸ್ಥಾಪನೆ: ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಡಿಸೆಂಬರ್ ,8, 2022(www.justkannada.in): ನಗರದ ಎನ್ ಜಿಇಎಫ್ ಕಾರ್ಖಾನೆ ಜಾಗದಲ್ಲಿ ತಲೆ ಎತ್ತುತ್ತಿರುವ ವೃಕ್ಷೋದ್ಯಾನದ ಆವರಣದಲ್ಲಿ  ‘ಇನ್ನೋವೇಶನ್ ಎಕ್ಸ್ಪೀರಿಯನ್ಸ್ ಸೆಂಟರ್’ ಕೂಡ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದ ಲಲಿತ್ ಅಶೋಕ್ ಹೋಟೆಲಿನಲ್ಲಿ ಇಂಟರ್ ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕೌನ್ಸಿಲ್ ಸೇರಿದಂತೆ ಇತರ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿರುವ ಮೂರು ದಿನಗಳ ‘ಫ್ಯೂಚರ್ ಡಿಸೈನ್ ಫೆಸ್ಟಿವಲ್’ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಗತ್ತಿನ ಎಲ್ಲ ಪ್ರಮುಖ ನಗರಗಳಲ್ಲಿ ಅಲ್ಲಿನ ಬೆಳವಣಿಗೆಗೆ ದಿಕ್ಕುದೆಸೆ ತೋರುವ ಸಿಟಿ ಸೆಂಟರ್ ಇರುತ್ತದೆ. ಬೆಂಗಳೂರಿನ ವಿಸ್ತಾರವನ್ನು ಪರಿಗಣಿಸಿ  ಎಂಟು ದಿಕ್ಕುಗಳಲ್ಲೂ ಸಿಟಿ ಸೆಂಟರ್ ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.

ಈ ಕೇಂದ್ರಗಳನ್ನು ಸಮಕಾಲೀನ ಜಗತ್ತಿನ ಮಾನದಂಡಗಳಿಗೆ ತಕ್ಕಂತೆ ಸುಸ್ಥಿರತೆ ಮತ್ತು ಪರಿಸರಸ್ನೇಹಿಯಾಗಿ ಪ್ರಕೃತಿಯ ಹಸಿರು ಸಂಪತ್ತಿನೊಂದಿಗೆ ಬೆಸೆಯಲಾಗುವುದು. ಇಂತಹ ಮಾದರಿ ಬೇರೆಡೆ ಎಲ್ಲೂ ಇಲ್ಲ ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.

ಜಗತ್ತಿನ ದೊಡ್ಡ ದೊಡ್ಡ ನಗರಗಳಲ್ಲಿ ಅಲ್ಲಿನ ಬೆಳವಣಿಗೆಗೆ ಪೂರಕವಾಗಿ ಸಿಟಿ ಸೆಂಟರ್ಸ್ ಇವೆ. ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಬೆಂಗಳೂರಿನಲ್ಲಿ ಇಂತಹ ಕೇಂದ್ರಗಳು ಇಲ್ಲದೆ ಇರುವುದು ಕೊರತೆಯಾಗಿದೆ. ರಸ್ತೆ, ಕೆರೆಕಟ್ಟೆಗಳು ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಪರಿಗಣಿಸಿ ನಮ್ಮ ವಿನ್ಯಾಸಗಳು ಇರಬೇಕು ಎಂದು ಅವರು ಸಲಹೆ ನೀಡಿದರು.

ಪಠ್ಯದಲ್ಲಿ ಡಿಸೈನ್ ಸೇರ್ಪಡೆಗೆ ಚಿಂತನೆ

ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ಮಾತನಾಡಿ, ಸುಸ್ಥಿರ ಅಭಿವೃದ್ಧಿಯ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಡಿಸೈನ್ ಕಲಿಕೆಯನ್ನು ಎನ್ ಇಪಿ ಪಠ್ಯಕ್ರಮದ ಭಾಗವಾಗಿಸುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುತ್ತಿದೆ ಎಂದರು.

ಬೆಂಗಳೂರು ನಗರವು ಅತ್ಯಾಧುನಿಕ ತಂತ್ರಜ್ಞಾನಗಳ ಬೆಳವಣಿಗೆಗೆ ಪ್ರಶಸ್ತ ನಗರವಾಗಿದ್ದು, ಇಲ್ಲಿನ ಕಾರ್ಯ ಪರಿಸರವು ಅದ್ಭುತವಾಗಿದೆ. ಐಟಿ-ಬಿಟಿ ಗಳಂತೆಯೇ ರಾಜ್ಯವು ಮುಂಬರುವ ದಿನಗಳಲ್ಲಿ ಡಿಸೈನ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಐಚ್ಛಿಕ ವಿಷಯಗಳ ಆಯ್ಕೆಗೆ ಮುಕ್ತ ಅವಕಾಶ ಇದೆ. ಹೀಗಾಗಿ, ಡಿಸೈನ್ ಅಧ್ಯಯನವನ್ನು ಒಂದು ವಿಷಯವಾಗಿ ಸೇರ್ಪಡೆ ಮಾಡುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ  ಹಿತವಾಗಿದೆ ಎನ್ನುವುದು ಸರಕಾರದ ಚಿಂತನೆಯಾಗಿದೆ ಎಂದು ವಿವರಿಸಿದರು.

ಡಿಸೈನ್ ಉದ್ಯಮವು ಬೆಂಗಳೂರು ನಗರದಲ್ಲಿ ಜಾಗತಿಕ ಗುಣಮಟ್ಟದೊಂದಿಗೆ ಬೇರೂರಬೇಕು. ಸರಕಾರವು ಇದಕ್ಕೆ ಎಲ್ಲಾ ನೆರವನ್ನೂ ನೀಡಲಿದೆ ಎಂದು ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ಅಂತರರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಮಿತಿಯ ಮುಖ್ಯಸ್ಥ ಟಾಮ್ ಜೋಸೆಫ್, ಗೀತಾ ನಾಯರ್ ಮುಂತಾದವರು ಉಪಸ್ಥಿತರಿದ್ದರು.

Key words: Establishment – Innovation –Experience- Center – Bangalore-CM-Basavaraja Bommai

ENGLISH SUMMARY…

City Centres to come up at 8 locations

Innovation Experience Centre integrated with greenery to be set up in the capital: Basavaraja Bommai

Bengaluru: Chief Minister Basavaraja Bommai, said on Thursday, an ‘Innovation Experience Centre: integrated with greenery would be set up in the City along with the tree park at the NGEF premises.

Inaugurating the Future Design Summit of the Bengaluru Design District 22, he said, “Normally greenery would not be combined with innovation experience centre. But, realising the importance of sustainability and eco friendlyness his government had decided to establish innovation experience centre merged with greenery.”

He also opined that the proposed innovation experience centre would become a location a national and international tourist spot.’

Bommai also announced that ‘City Centres’ would be set up in all the eight directions of the capital city and the government had instructed officials pertaining to this.

“All the cities of the world have a city Centre. However, it is unfortunate our city is deprived of this. Now our government has decided to fill this gap. The City Centres to come up would involve in developing the metropolis in a well planned model,” he remarked.

He also called on designers to create designs for better road management, better water management including conservation of lakes and better commercial activities.

Speaking on the occasion, Dr CN Ashwath Narayan, Minister for Skill Development and IT/BT said that there had been a thought to include Design Learning as part of the NEP curriculum.

He expressed confidence that the city of Bengaluru which has been in the forefront of in IT/BT and Startups would also become a preferred global destination for designing.

PWD Minister CC Patil, International Skvill Development Corporation Executive Director Tom Joseph, Startup Vision Group Chairperson Prashant Prakash, Geeta Nair were among a few who attended.