ಟೀಂ ಇಂಡಿಯಾ ಲಕ್ಕಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಇಂದಿನಿಂದ ಶುರು

Promotion

ಬೆಂಗಳೂರು, ಆಗಸ್ಟ್ 25, 2021 (www.justkannada.in):  ಇಂದಿನಿಂದ ಲೀಡ್ಸ್ ನ ಹೆಡ್ಡಿಂಗ್ಲೇ ಮೈದಾನದಲ್ಲಿ ಗೆಲುವಿಗಾಗಿ ಭಾರತ-ಇಂಗ್ಲೆಂಡ್ ತಂಡಗಳು ಸೆಣೆಸಾಡಲಿವೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಅಂದಹಾಗೆ ಈ ಮೈದಾನ ಭಾರತದ ಪಾಲಿಗೆ ಅದೃಷ್ಟದ ತಾಣ. ಇಲ್ಲಿ ಟೀಂ ಇಂಡಿಯಾ ಸೋತಿದ್ದೇ ಇಲ್ಲ.

ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ಸ್ಥಾನದಲ್ಲಿ ರವಿಚಂದ್ರನ್ ಅಶ್ವಿನ್ ಆಡುವ ಸಾಧ್ಯತೆ ಇದೆ. ಉಳಿದಂತೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನಲಾಗಿದೆ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.