ಇನ್’ಸ್ಟಾಗ್ರಾಂ ರೀಲ್’ನಲ್ಲಿ ವಾರ್ನರ್ ಬಳಸಿದ ಕನ್ನಡ ಹಾಡು ಕೇಳಿ ಕನ್ನಡಿಗರು ಫುಲ್ ಖುಷ್!

ಬೆಂಗಳೂರು, ಆಗಸ್ಟ್ 25, 2021 (www.justkannada.in): ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಮಾಡಿದ ಇನ್ ಸ್ಟಾಗ್ರಾಂ ರೀಲ್ ಕನ್ನಡಿಗರ ಹೃದಯ ಗೆದ್ದಿದೆ!

ಹೌದು. ವಾರ್ನರ್ ತಮ್ಮ ಮಗಳ ವೀಡಿಯೋ ಒಂದಕ್ಕೆ ಕನ್ನಡ ಹಾಡೊಂದನ್ನು ಬಳಸಿಕೊಂಡು ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನು ನೋಡಿದ ಕನ್ನಡಿಗರು ವಾರ್ನರ್ ಕನ್ನಡ ಪ್ರೀತಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಂದಹಾಗೆ ಪ್ರತಿ ಬಾರಿ ಇಲ್ಲಿನ ಸಿನಿಮಾ ಹಾಡುಗಳನ್ನು ಕೇಳುತ್ತಿರುತ್ತಾರೆ.

ವಾರ್ನರ್ ತಮ್ಮ ಮಗಳ ಮುದ್ದಾದ ವೀಡಿಯೋ ಒಂದಕ್ಕೆ ಕನ್ನಡದ “ಅಪ್ಪ ಐ ಲವ್ ಯು ಪಾ” ಹಾಡನ್ನು ಬಳಸಿಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.