ಹಫ್ತಾ ನೀಡಲು ನಿರಾಕರಿಸಿದ್ದಕ್ಕೆ ಸಿವಿಲ್ ಎಂಜಿನಿಯರ್ ಮೇಲೆ ಹಲ್ಲೆ: ಸ್ಥಳೀಯ ಗೂಂಡಾ ಬಂಧನ

ಬೆಂಗಳೂರು:ಆ-6:(www.justkannada.in) ಹಫ್ತಾ ನೀಡಲು ನಿರಾಕರಸಿದ ಕಾರಣಕ್ಕೆ ಸ್ಥಳೀಯ ಗೂಂಡಾಗಳು ಸಿವಿಲ್ ಎಂಜಿನಿಯರ್ ಒಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿ ಇಂದಿರಾನಗರ ನಿವಾಸಿ ಬಿ ಎಸ್ ವಿಶ್ವನಾಥ್ (57) ಸಿವಿಲ್ ಎಂಜಿನಿಯರ್ ಆಗಿದ್ದು, ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 2018 ಅಕ್ಟೋಬರ್ ನಿಂದ ಹಲಸೂರಿನ ದಾಮೋದರ್ ಮುದಲಿಯಾರ್ ರೋಡ್ ನಲ್ಲಿ ವಿಶ್ವನಾಥ್ ಅವರು ವಸತಿ ಸಂಕೀರ್ಣವೊಂದನ್ನು ನಿರ್ಮಿಸುತ್ತಿದ್ದು, ಸ್ಥಳೀಯ ಗೂಂಡಾಗಳು ಈ ಜಾಗದಲ್ಲಿ ಬಂದು ಅನಗತ್ಯವಾಗಿ ತೊಂದರೆ ಕೊಡಲು ಆರಂಭಿಸಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ತೊಂದರೆ ಮಾಡಬರದೆಂದರೆ ಹಫ್ತಾ ನೀಡಬೇಕು ಎಂದು ಗೂಂಡಾಗಳು ಒತ್ತಾಯಿಸಿದ್ದಾರೆ. ಇದಕ್ಕೆ ವಿಶ್ವನಾಥ್ ಅವರು ಒಪ್ಪದಿದ್ದಾಗ ಅವರನ್ನು ಮನಬಂದಂತೆ ಥಳಿಸಿದ್ದಾರೆ. ಈ ಕುರಿತು ವಿಶ್ವನಾಥ್ ದೂರು ದಾಖಲಿಸಿದ್ದು, ಗೂಂಡಾಗಳಿಂದ ತಮಗೆ ಹಾಗೂ ವಸತಿ ಸಂಕೀರ್ಣ ನಿರ್ಮಾಣಕ್ಕೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ನೀಡುವಂತೆ ಪೊಲಿಸರಿಗೆ ಮನವಿ ಮಾಡಿದ್ದಾರೆ.

ಹಲ್ಲೆ ನಡೆಸಿದ ಗೂಂಡಾಗಳನ್ನು ಹಲಸೂನವರೇ ಆದ ನಟರಾಜ್ ಎಂದು ಗುರುತಿಸಲಾಗಿದ್ದು, ಆತನ ಜತೆಗೆ ಇನ್ನೂ ಇಬ್ಬರು ಇದ್ದರು ಎನ್ನಲಾಗಿದೆ. ಈ ಗೂಂಡಾಗಳು ಕಟ್ಟದ ಓನರ್ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೂ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ಪ್ರಕರಣ ಸಂಬಂಧ ಹಲಸೂರು ಪೊಲೀಸರು ನಟರಾಜ್ ನನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.

ಹಫ್ತಾ ನೀಡಲು ನಿರಾಕರಿಸಿದ್ದಕ್ಕೆ ಸ್ವಿಲ್ ಎಂಜಿನಿರ್ ಮೇಲೆ ಹಲ್ಲೆ: ಸ್ಥಳೀಯ ಗೂಂಡಾ ಬಂಧನ
Engineer roughed up for not paying hafta