ಸಾಂಕೇತಿಕ ಪ್ರತಿಭಟನೆ ಮುಕ್ತಾಯ, ಬೆಂಗಳೂರು ಕಡೆಗೆ ಬಸ್ ಸಂಚಾರ ಆರಂಭ

Promotion

ಮೈಸೂರು,ಸೆಪ್ಟೆಂಬರ್,28,2020(www.justkannada.in) : ಗ್ರಾಮಾಂತರ ಬಸ್ ನಿಲ್ದಾಣದ ಬಳಿ ನಡೆಯುತ್ತಿದ್ದ ಸಾಂಕೇತಿಕ ಪ್ರತಿಭಟನೆ ಮುಕ್ತಾಯಗೊಳಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಕಡೆಗೆ ಬಸ್ ಸಂಚಾರ ಆರಂಭ. ಬಸ್ ಹತ್ತಲು ಪ್ರಾಯಾಣಿಕರು ಮುಗಿಬಿದ್ದರು.jk-logo-justkannada-logo

ಗ್ರಾಮಾಂತರ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟ ರೈತರನ್ನ ಪೊಲೀಸರು ತಡೆದರು. ಹೀಗಾಗಿ, ಪ್ರತಿಭಟನೆಯನ್ನ ಟೌನ್ ಹಾಲ್ ಬಳೀ ನಡೆಸಲು ರೈತರು ತೀರ್ಮಾನಿಸಿದರು. ಪ್ರತಿಭಟನಕಾರರು ಬಸ್ ನಿಲ್ದಾಣದಿಂದ ತೆರಳಿದ ಬಳಿಕ ನಿಲ್ದಾಣವು ಸಂಪೂರ್ಣ ಖಾಲಿಖಾಲಿಯಾದಂತ್ತಾಯಿತು. ಈ ಸಂದರ್ಭ ಬಸ್ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು.

end-symbolic-protest-start-bus-traffic-towards-Bangalore

 

ಪ್ರಯಾಣಿಕರಿಗಾಗಿ ಕಾದು ಕುಳಿತ ಚಾಲಕರು, ಕಂಡಕ್ಟರ್‌ಗಳು

ಬೆಳಿಗ್ಗೆ 9 ಘಂಟೆ ಬಳಿಕ ಬಸ್ ಸಂಚಾರ ಆರಂಭವಾಯಿತು. ಸಾರಿಗೆ ಆರಂಭವಾಯಿತು. ಆದರೆ, ಪ್ರಯಾಣಿಕರ ಸಂಖ್ಯೆಯಲ್ಲಿ ವಿರಳವಾಗಿತ್ತು. ಪ್ರಯಾಣಿಕರಿಗಾಗಿ ಕಾದು ಕುಳಿತ ಬಸ್‌ ಚಾಲಕರು, ಕಂಡಕ್ಟರ್‌ಗಳು. ನಗರದ ವಿವಿಧೆಡೆಗೆ ನಗರ ಸಾರಿಗೆ ಬಸ್ ಗಳು ತೆರಳುತ್ತಿವೆ.

key words : end-symbolic-protest-start-bus-traffic-towards-Bangalore