ಅನಿವಾರ್ಯ ಕೆಲಸಕ್ಕೆ ತೆರಳಬೇಕಾದ ಪ್ರಯಾಣಿಕರ ಪರದಾಟ

ಮೈಸೂರು,ಸೆಪ್ಟೆಂಬರ್,28,2020(www.justkannada.in)  : ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅನಿವಾರ್ಯ ಕೆಲಸಕ್ಕೆ ತೆರಳಲು ಆಗಮಿಸಿದ ಕೆಲವು ಪ್ರಯಾಣಿಕರು ಪರದಾಡುವಂತ್ತಾಗಿದೆ.jk-logo-justkannada-logo

ರೈತ ವಿರೋಧಿ ಮಸೂದೆಗಳ ಖಂಡಿಸಿ ಕರ್ನಾಟಕ ಬಂದ್ ಹಿನ್ನೆಲೆ ನಗರ ಬಸ್ ನಿಲ್ದಾಣ ಹಾಗೂ ಗ್ರಾಮಾಂತರ ಬಸ್ ಖಾಲಿಯಾಗಿತ್ತು. ಐಕ್ಯ ಹೋರಾಟದ ಹಿನ್ನೆಲೆ ಬಸ್ ಗಳು ಬೀದಿಗಳಿದಿರಲಿಲ್ಲ.

ರಸ್ತೆ, ವೃತ್ತಗಳ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ನಡುವೆಯೂ ಪ್ರತಿ 10 ನಿಮಿಷಕ್ಕೆ ಒಂದು ಬಸ್ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿತ್ತು. ಮೈಸೂರಿನಿಂದ ರಾಜ್ಯದ ವಿವಿಧೆಡೆಗೆ ಪ್ರಯಾಣ ಬೆಳೆಸುತ್ತಿದ್ದವು‌. ನಗರ ಬಸ್ ನಿಲ್ದಾಣದಲ್ಲೂ ಬಸ್ ಸಂಚಾರವಿಲ್ಲ.

ಪ್ರತಿಭಟನೆ ಅರಿವಿದ್ದರೂ ಪ್ರಯಾಣಿಕರ ಪ್ರಯಾಣ ಅನಿವಾರ್ಯ. ಕೆಲಸಕ್ಕೆ ತೆರಳಲು ಕೆಲವು ಪ್ರಯಾಣಿಕರ ಪರದಾಡುವ ಸ್ಥಿತಿ ಎದುರಾಗಿತ್ತು.

key words : Traveler’s-parade-inevitable-work