ತಂತ್ರಜ್ಞಾನಕ್ಕೆ ಒತ್ತು; ಬೆಂಗಳೂರು ಟೆಕ್‌ ಸಮಿಟ್‌-2020ನಲ್ಲಿ ವಾದ ಮಂಡಿಸಿದ ನಾಲ್ವರು ಸಚಿವರು

ಬೆಂಗಳೂರು,ನವೆಂಬರ್,21,2020(www.justkannada.in):  ಮೂರು ದಿನಗಳ ಬೆಂಗಳೂರು ಟೆಕ್‌ ಸಮಿಟ್‌-2020 ನಲ್ಲಿ ಮಾತನಾಡಿದ ರಾಜ್ಯದ ನಾಲ್ವರು ಪ್ರಮುಖ ಸಚಿವರು, ತಮ್ಮ ಇಲಾಖೆಗಳಲ್ಲಿ ಹಾಕಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ನೆರವಿನಿಂದ ಕೈಗೊಳ್ಳಲಿರುವ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಿದರು.

ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್‌, ಟೆಕ್‌ ಸಮಿಟ್‌ನಲ್ಲಿ ಶನಿವಾರ ಮಾತನಾಡಿದರು.

ಕೋವಿಡ್‌ ನಡುವೆಯೂ ಪ್ರಗತಿ:

ಇಡೀ ಜಗತ್ತು ಕೋವಿಡ್‌ನಿಂದ ತಲ್ಲಣಗೊಂಡಿದ್ದು, ಕೈಗಾರಿಕಾಭಿವೃದ್ಧಿ ಕುಂಠಿತವಾಗಿದೆ. ಆದರೆ, ಕರ್ನಾಟಕವು ಒತ್ತಡದ ಪರಿಸ್ಥಿತಿಯಿಂದ ಬಹುಬೇಗ ಚೇತರಿಸಿಕೊಂಡಿದ್ದು, ಈಗ ಎಲ್ಲವೂ ಸಹಜಸ್ಥಿತಿಗೆ ಮರಳಿದೆ. ಉತ್ಪಾದನೆಯೂ ಮೊದಲಿನ ಸ್ಥಿತಿಗೇ ಮರಳಿದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದರು.kannada-journalist-media-fourth-estate-under-loss

ಸಂಕಷ್ಟದ ಸಮಯದಲ್ಲಿ ಡಿಜಿಟಲ್‌ ಎಕಾನಮಿಯ ಪರಿಕಲ್ಪನೆ ಅತ್ಯುತ್ತಮವಾಗಿ ನೆರವಿಗೆ ಬಂದಿದ್ದು, ಪ್ರಸ್ತುತ ವ್ಯಾಪಾರ-ವಹಿವಾಟು ಕ್ಷೇತ್ರದಲ್ಲಿ ಡಿಜಟಲೀಕರಣ ವೇಗವಾಗಿ ಆಗುತ್ತಿದೆ. ಇದರಿಂದ ಉತ್ಪಾದಕ, ಮಾರಾಟಗಾರ ಹಾಗೂ ಗ್ರಾಹಕನಿಗೆ ಹೆಚ್ಚು ಅನುಕೂಲವಾಗುತ್ತಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಕರ್ನಾಟಕವು ಈ ನಿಟ್ಟಿನಲ್ಲಿ  ಮುಂಚೂಣಿಯಲ್ಲಿದೆ ಎಂದು ಅವರು ಪ್ರತಿಪಾದಿಸಿದರು.

ಸರಕಾರವು ಈಗಾಗಲೇ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಫಾರ್‌ ಸ್ಮಾರ್ಟ್‌ ಪ್ರೊಡಕ್ಷನ್‌ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಇದನ್ನು ಬಾಶ್‌, ಜನರಲ್‌ ಎಲೆಕ್ಟ್ರಿಕಲ್ಸ್‌, ಡಸಾಲ್ಟ್‌, ಸೀಮನ್ಸ್‌ ಕಂಪನಿಗಳ ಸಹಯೋಗದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಜಗದೀಶ್‌ ಶೆಟ್ಟರ್‌ ತಿಳಿಸಿದರು.

ಸೈಬರ್‌ ಸೆಕ್ಯೂರಿಟಿಗೆ ಒತ್ತು:

ಸಮಿಟ್‌ನಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಿಷ್ಟು; “ತಂತ್ರಜ್ಞಾನದ ಬೆಳವಣಿಗೆ ಹೆಚ್ಚಿದಂತೆಲ್ಲ ಸೈಬರ್‌ ಸೆಕ್ಯೂರಿಟಿಯ ಸವಾಲುಗಳೂ ಹೆಚ್ಚುತ್ತಿವೆ. ಇಂಥ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸರಕಾರ ಎಲ್ಲ ರೀತಿಯ ಹೆಜ್ಜೆಗಳನ್ನೂ ಇಟ್ಟಿದೆ. ಅದಕ್ಕೆ ಪೂರಕವಾಗಿ ಆಧುನಿಕ ತಂತ್ರಜ್ಞಾನವನ್ನು ಚೆನ್ನಾಗಿ ಬಳಸಿಕೊಳ್ಳಲಾಗುತ್ತಿದೆ” ಎಂದರು.

ಜಗತ್ತಿನೆಲ್ಲಡೆ ಡ್ರಗ್‌ ಸಾಗಣೆ, ಮಾನವ ಸಂಪನ್ಮೂಲ ಕಳ್ಳ ಸಾಗಣೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಸೇರಿದಂತೆ ಅನೇಕ ವಿದ್ರೋಹಿ ಚಟುವಟಿಕೆಗಳು ಹೆಚ್ಚುತ್ತಿವೆ. ಹಾಗೆಯೇ, ಆರ್ಥಿಕ ಅಪರಾಧಗಳು ಕೂಡ ನಡೆಯುತ್ತಿವೆ. ಇವೆಲ್ಲವನ್ನು ಹತ್ತಿಕ್ಕಲು ರಾಜ್ಯದಲ್ಲಿ ಸೈಬರ್‌ ಪೊಲೀಸ್‌ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಸೈಬರ್‌ ಪೊಲೀಸರಿಗೆ ಎಲ್ಲ ರೀತಿಯ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಸಮಾಜದಲ್ಲಿ ಆಶಾಂತಿ ಸೃಷ್ಟಿಸುತ್ತಿರುವ ಫೇಕ್‌ ನ್ಯೂಸ್‌ ವಿರುದ್ಧವೂ ಸರಕಾರ ಕ್ರಮ ಕೈಗೊಳ್ಳಲಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆಯೇ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಮುಖ್ಯವಾಗಿ ವಾಟ್ಸ್ ಅಪ್‌, ಟಿಟ್ಟರ್‌, ಇನ್ಸ್‌ಟಾಗ್ರಾಂ, ಫೇಸ್‌ಬುಕ್‌, ಯುಟ್ಯೂಬ್‌ ಸೇರಿದಂತೆ ಆನ್‌ಲೈನ್‌ ಫ್ಲಾಟ್‌ಫಾರಂಗಳಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವಂಥ ಎಲ್ಲ ಸುಳ್ಳುಸುದ್ದಿಗಳನ್ನು ಹರಡುವುದನ್ನು ತಡೆಯಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ:

ಕೋವಿಡ್‌ ಸಂಕಷ್ಟದ ಹೊತ್ತಿನಲ್ಲಿ ತಂತ್ರಜ್ಞಾನವು ರಾಜ್ಯ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಪೂರಕವಾಯಿತು. ಈಗ ನಡೆಯುತ್ತಿರುವ ಆನ್‌ಲೈನ್‌ ತರಗತಿ ಸೇರಿದಂತೆ ಇಲಾಖೆಯ ಬಹುತೇಕ ಚಟುವಟಿಕೆಗಳು ಆನ್‌ಲೈನ್‌ ಮೂಲಕವೇ ನಡೆಯುತ್ತಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್‌ ಹೇಳಿದರು.

ಎಲ್ಲರಿಗೂ ಗೊತ್ತಿರುವಂತೆ, ಕರ್ನಾಟಕವು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಈ ಪರಂಪರೆ ಮುಂದೆಯೂ ಮುಂದುವರಿಯಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ-2020 ಅನ್ನು ಕೂಡ ಕ್ಷಿಪ್ರಗತಿಯಲ್ಲಿ ಜಾರಿ ಮಾಡಲು ಸರಕಾರ ಮುಂದಾಗಿದೆ. ಹಾಗೆ ನೋಡಿದರೆ, ಈ ನೀತಿಯನ್ನು ಮೊತ್ತ ಮೊದಲು ಜಾರಿ ಮಾಡಲೊರಟ ರಾಜ್ಯ ಕರ್ನಾಟಕವೇ ಆಗಿದೆ ಎಂದರು ಸುರೇಶ್‌ ಕುಮಾರ್.‌

ಜೈವಿಕ ತಂತ್ರಜ್ಞಾನದಿಂದ ಕೃಷಿಗೆ ಲಾಭ:

ಟೆಕ್‌ ಸಮಿಟ್‌ನಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರು, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಕರ್ನಾಟಕವು ಕೃಷಿ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆಗಳನ್ನಿಟ್ಟಿದೆ. ಅದರಲ್ಲೂ ಆಹಾರ ಪದಾರ್ಥಗಳ ಕೊರತೆಯನ್ನು ನೀಗಿಸಬೇಕಾದರೆ ಜೈವಿಕ ತಂತ್ರಜ್ಞಾನವೇ ಪರಿಹಾರ ಎಂಬುದನ್ನು ಮನಗಂಡಿದೆ ಎಂದರು.Emphasis –technology-Four Ministers - Bangalore Tech Summit -2020

ಈಗಾಗಲೇ ಬಿಟಿ ಹತ್ತಿ ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳ ಉತ್ಪಾದನೆಗೆ ಜೈವಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಕೃಷಿ ಉತ್ಪನ್ನಗಳ ಉತ್ಪಾದನೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡಲು ಸಾಧ್ಯವಾಗಿದೆ ಎಂದು ಸಚಿವರು ಹೇಳಿದರು.

English summary….

Four ministers stress on technology at Bengaluru Tech Summit-2020
Bengaluru, Nov. 21, 2020 (www.justkannada.in): Sri Jagadish Shettar, Minister for Large and Medium Scale Industries, Sri Basavaraj Bommai, Home Minister, Sri Suresh Kumar, Primary and Secondary Education Minister and Sri B.C. Patil, Agriculture Minister stressed on the various programmes that have been implemented based on technology, apart from sharing information about the various programmes planned by respective departments.
Speaking on the occasion, Sri Jagadish Shetter, Minister for large scale industries opined that though the entire world has been facing the impact of Covid-19 pandemic, resulting in a decline in industrial development, Karnataka has been successful in recovering from the impact soon. He said that everything has become almost normal and production has also returned to normal.
In his address Home Minister Basavaraj Bommai said that the government has taken all necessary measures to face the cyber security challenges by adopting modern technological methods.Emphasis –technology-Four Ministers - Bangalore Tech Summit -2020
Minister Suresh Kumar expressed his view that the digital technology came to the help of students during the Covid pandemic time. “The State Government is all set to implement the National Education Programme-2020 rapidly,” he added.
Agriculture Minister B.C. Patil opined that Karnataka has taken a big step in the agricultural sector by adopting technology. “We have clearly understood that bio-technology is one of the best solution to solve the problem of shortage of food production,” he said.
Keywords: Bengaluru Tech Summit-2020/Stress on Technology

Key words: Emphasis –technology-Four Ministers – Bangalore Tech Summit -2020