ಸಸ್ಯಜನ್ಯ ಪ್ರೋಟೀನ್ ಗಳ ತಯಾರಿಕೆಗೆ ಒತ್ತು- ಸಿ.ಎಫ್.ಟಿ.ಆರ್.ಐ ಸಂಸ್ಥೆಯ ಡಾ. ಶ್ರೀದೇವಿ ಹೇಳಿಕೆ.

ಬೆಂಗಳೂರು,ನವೆಂಬರ್,20,2021(www.justkannada.in):  ಪ್ರಸ್ತುತ ಪ್ರಾಣಿಜನ್ಯ ಪ್ರೋಟೀನ್ ಬದಲು ಸಸ್ಯಜನ್ಯ ಪ್ರೋಟೀನ್ ಬಳಕೆಗೆ ಹೆಚ್ಚು ಒತ್ತು ದೊರೆಯಲು ಆರಂಭವಾಗಿದ್ದು, ಎನ್ಜೈಮ್ ಮೂಲಕ ಪ್ರೋಟೀನ್ ತಯಾರಿಸುವ ನಿಟ್ಟಿನಲ್ಲೂ ಪ್ರಯೋಗಗಳು ನಡೆದಿವೆ ಎಂದು ಸಿ.ಎಫ್.ಟಿ.ಆರ್.ಐ ಸಂಸ್ಥೆಯ ಡಾ. ಶ್ರೀದೇವಿ ಹೇಳಿದರು.

ಬೆಂಗಳೂರು ಟೆಕ್ ಶೃಂಗದಲ್ಲಿ ಗೋಷ್ಠಿಯಲ್ಲಿ ಮಾತನಾಡಿದ ಡಾ. ಶ್ರೀದೇವಿ, ಕಡಿಮೆ ದರದಲ್ಲಿ ಪ್ರೋಟೀನ್ ಒದಗಿಸುವ ಯೋಜನೆ ವಿಳಂಬವಾಗಬಹುದು ಎಂದ ಅವರು. ಕೇಂದ್ರ ಸರ್ಕಾರವು 2023ನೇ ಇಸವಿಯನ್ನು ‘Millet Year’  ಎಂದು ಘೋಷಿಸಿರುವ ಹಿನ್ನೆಲೆಯಯಲ್ಲಿ ಆಸಕ್ತ ಉದ್ಯಮಿಗಳು ಮತ್ತು ಸಂಸ್ಥೆಗಳಿಗೆ ಸಂಸ್ಥೆಯು ನೆರವು ನೀಡಲಿದೆ ಎಂದು ತಿಳಿಸಿದರು.

ಕೃಷ್ಣಮೋಹನ್ ಅವರು ಮಾತನಾಡಿ, ಕಾರ್ಬನ್ ಡೈ ಆಕ್ಸೈಡ್ ಮತ್ತು ಮಾಲಿನ್ಯ ನಿಯಂತ್ರಣದತ್ತ ಕಾರ್ಯ ನಿರ್ವಹಿಸುವುದು ಅಗತ್ಯವಾಗಿದೆ. ನಾವು ರಾಸಾಯನಿಕಗಳ ಬಳಕೆಯನ್ನು ಕಡಿಮೆಗೊಳಿಸುವುದು ಅಗತ್ಯವಾಗಿದೆ. ಭಾರತವು ಈ ನಿಟ್ಟಿನಲ್ಲಿ ಪೂರಕವಾದ ವ್ಯವಸ್ಥೆಗಳನ್ನು ರೂಪಿಸಿದೆ. ಜಗತ್ತಿನೆಲ್ಲೆಡೆ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪ್ರೋಟೀನ್ ಬಳಕೆಯ ಅಗತ್ಯವೂ ಹೆಚ್ಚಿದೆ ಎಂದರು.

ಆಶೀಶ್ ಪರ್ದಾಕರ್ ಅವರು ಮಾತನಾಡಿ, ಸಾಂಪ್ರದಾಯಿಕ ವಿಧಾನಗಳು ಮತ್ತು ಸಂಶೋಧನೆಗಳನ್ನು ಪರಸ್ಪರ ಪೂರಕವಾಗಿ ಬಳಸುತ್ತಾ ತಂತ್ರಜ್ಞಾನದ ನೆರವಿನಿಂದ ಮಹತ್ತನ್ನು ಸಾಧಿಸಬಹುದು. 130 ಕೋಟಿ ಜನರ ಅಗತ್ಯಗಳನ್ನು ಪೂರೈಸಲು ಹೊಸ ಹೊಸ ಸಂಶೋಧನೆಗಳು ನಡೆಯಬೇಕು. ಸೋಯಾ ಮತ್ತಿತರ ಧಾನ್ಯಗಳಿಂದ ಸಸ್ಯಜನ್ಯ ಪ್ರೋಟೀನ್ ಗಳು, ಹಂದಿ ದನಗಳಿಂದ ಉತ್ಪಾದನೆ ಆಗುವ ಪ್ರಾಣಿಜನ್ಯ ಪ್ರೋಟೀನ್ ಗಳು ಜೊತೆಜೊತೆಗೆ ಇತರ ಮೂಲಗಳ ಪ್ರೋಟೀನ್ ಗಳ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಇಥೆನಾಲ್ ಇಂಧನಗಳ ಉತ್ಪಾದನೆ ಸಂಬಂಧವಾಗಿ 20% ಗುರಿಯನ್ನು ಇರಿಸಿಕೊಳ್ಳಲಾಗಿತ್ತು. ಮೊಲಾಸಿಸ್ ಮೂಲಕ ಇಥೆನಾಲ್ ಉತ್ಪಾದನೆ ಮಾಡಲಾಗುತ್ತಿತ್ತು. ಇದೀಗ, ಶುಗರ್ ಸಿರಪ್, ಬಿ ಮೊಲಾಸಿಸ್, ಧಾನ್ಯಗಳಿಂದಲೂ ತಯಾರಿಸುವ ಪ್ರಕ್ರಿಯೆ ಆರಂಭವಾಗಿದೆ. ಇವೆಲ್ಲಾ ಸೇರಿಯು ಕೇವಲ 1.40% ಗುರಿ ಸಾಧನೆ ಮಾಡಲು ಸಾಧ್ಯವಾಗಿದೆ.  ಪರಿಷ್ಕೃತ ಗುರಿಯಂತೆ ಇದೀಗ 2022ರ ವೇಳೆಗೆ  10% ಮತ್ತು 2025ರ ವೇಳೆಗೆ 20% ಗುರಿಯನ್ನು ಹೊಂದಲಾಗಿದೆ. ಈ ಗುರಿಯನ್ನು ಸಂಪೂರ್ಣ ಸಾಧಿಸಲು ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಮಾಡಬೇಕಾಗುತ್ತದೆ. ಕರ್ನಾಟಕ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಡಾ. ವೈ ಬಿ ರಾಮಕೃಷ್ಣ  ತಿಳಿಸಿದರು. ಮಾಲಿನ್ಯರಹಿತ ಇಂಧನ ಉತ್ಪಾದನೆಯು ನಮ್ಮ ಗುರಿ ಆಗಿರಬೇಕು ಎಂದೂ ಅವರು ಒತ್ತಿ ಹೇಳಿದರು.

Key words: Emphasis – manufacture – vegetable –proteins-CFTRI –Dr. Sridevi.