ನಾವು 17 ಜನ ಮಂತ್ರಿಗಳಾಗಲು ಅರ್ಹರು: ಸೋತವರಿಗೆ ಸಚಿವ ಸ್ಥಾನ ಇಲ್ಲ ಎನ್ನುತ್ತಿರುವವರು ಸುಪ್ರೀಂ ತೀರ್ಪು ಓದಿಲ್ಲ- ಹೆಚ್.ವಿಶ್ವನಾಥ್….

Promotion

ಬೆಂಗಳೂರು,ಜ,7,2020(www.justkannada.in):  ನಾವು 17 ಜನ ಮಂತ್ರಿಗಳಾಗಲು ಅರ್ಹರಿದ್ದೇವೆ. ಸೋತರವರಿಗೆ ಸಚಿವ ಸ್ಥಾನ ಇಲ್ಲ ಅಂತಾ ಕೆಲವರು ಹೇಳ್ತಿದ್ದಾರೆ. ಹೀಗೆ ಹೇಳುವವರು ಸುಪ್ರೀಂಕೋರ್ಟ್ ತೀರ್ಪು ಓದಿಲ್ಲ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಹೆಚ್.ವಿಶ್ವನಾಥ್ , ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಹೇಳುತ್ತಿರುವವರು ಯಾರೂ ಕೋರ್ಟ್ ತೀರ್ಪು ಓದಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಓದಿರುತ್ತಿದ್ದರೆ ಅವರಿಗೆ ಗೊತ್ತಾಗಿರುತ್ತಿತ್ತು ಎಂದು  ಟಾಂಗ್ ನೀಡಿದರು.

ನಾವು 17 ಜನ ಮಂತ್ರಿಗಳಾಗುವುದಕ್ಕೆ ಅರ್ಹರಾಗಿದ್ದೇವೆ. ಈ ಸಂಬಂಧ ಶ್ರೀನಿವಾಸ್ ಪ್ರಸಾದ್ ಅವರ ಜತೆ ಚರ್ಚಿಸಿದ್ದೇನೆ. ಅವರಿಗೆ ಸುಪ್ರೀಂಕೋರ್ಟ್ ತೀರ್ಪಿನ ಪ್ರತಿ ಕೊಟ್ಟಿದ್ದೇನೆ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

ಸಚಿವ ಸ್ಥಾನಕ್ಕಾಗಿ ನಾನು ಬಿಎಸ್ ವೈರನ್ನ ಭೇಟಿ ಮಾಡಿಲ್ಲ. ಮಾತಿನ ಮೇಲೆ ನಿಲ್ಲುವಂತಹ  ನಾಯಕ ಬಿಎಸ್ ವೈ ಮಾತ್ರ.  ಅವರನ್ನ ನಾವು ನಂಬಿದ್ದೇವೆ.   ಹೀಗಾಗಿ ಸಂಪುಟ ವಿಸ್ತರಣೆಯನ್ನ ಅವರಿಗೆ ಬಿಟ್ಟಿದ್ದೇವೆ. ನಮಗೆ ಹೈಕಮಾಂಡ್ ಯಾರೂ ಗೊತ್ತಿಲ್ಲ.  ನಮಗೆ ಗೊತ್ತಿರುವುದು ಬಿಎಸ್ ವೈ ಮಾತ್ರ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

ಸೋತವರಿಗೆ ಸಚಿವ ಸ್ಥಾನ ಇಲ್ಲ ಅಂತಾ ಕೆಲವರು ಹೇಳುತ್ತಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಓದದವರು ಈ ರೀತಿ ಹೇಳುತ್ತಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಓದಿದ್ದರೇ ಅವರಿಗೆ ಗೊತ್ತಾಗುತ್ತಿತ್ತು ಎಂದು ತಿಳಿಸಿದರು.

Key words: eligible – become- 17 ministers-Supreme court-verdict -ministerial position – H. Vishwanath