ಹುಲ್ಲು ತರಲು ಹೋದಾಗ ಕಾಡಾನೆ ದಾಳಿ: ರೈತ ಸಾವು.

Promotion

ಮೈಸೂರು,ಫೆಬ್ರವರಿ,3,2022(www.justkannada.in): ಮನೆ ಹಿಂಭಾಗ ಹಿತ್ತಲಲ್ಲಿ ದನಗಳಿಗೆ ಹುಲ್ಲು ತರಲು ಹೋಗುವಾಗ  ಕಾಡಾನೆ ದಾಳಿ ನಡೆಸಿದ ಪರಿಣಾಮ ರೈತ ಸಾವನ್ನಪ್ಪಿರುವ ಘಟನೆ  ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕೊಳವಿಗೆ ಗ್ರಾಮದಲ್ಲಿ ನಡೆದಿದೆ.

ರಾಜೇಶ್ (50)  ಮೃತ ರೈತ.  ನಾಗರಹೊಳೆ ವೀರನಹೊಸಹಳ್ಳಿ ಅರಣ್ಯ ವಲಯದಿಂದ ಬಂದಿದ್ದ ಕಾಡಾ‌ನೆ, ಪಕ್ಕದ ಜಮೀನಿನಲ್ಲಿ ನಿಂತಿತ್ತು. ಈ ಮಧ್ಯೆ ರಾಜೇಶ್  ಮನೆ ಹಿಂಭಾಗ ಹಿತ್ತಲಲ್ಲಿ ದನಗಳಿಗೆ ಹುಲ್ಲು ತರಲು ಹೋದ ವೇಳೆ, ಏಕಾ ಏಕಿ ರಾಜೇಶ್ ಮೇಲೆ ಆನೆ ದಾಳಿ ನಡೆಸಿದೆ. ಇದರಿಂದಾಗಿ ರೈತ ರಾಜೇಶ್ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Elephant-attack-farmer-death