ವಿದ್ಯುತ್ ದರ ಹೆಚ್ಚಳ ಜನವಿರೋಧಿ ನಿರ್ಧಾರ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿ

Promotion

ಬೆಂಗಳೂರು,ನವೆಂಬರ್,09,2020(www.justkannada.in) : ಸರ್ಕಾರ ವಿದ್ಯುತ್ ದರವನ್ನು ಪ್ರತಿ ಯುನಿಟ್ ಗೆ 40 ಪೈಸೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಕೈಗಾರಿಕೆಗಳ, ರೈತರ, ವರ್ತಕರ, ಉದ್ಯಮಗಳ ವಿರೋಧಿ ನಿರ್ಧಾರವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.kannada-journalist-media-fourth-estate-under-loss

ಈ ಬಾರಿ ಉತ್ತಮ ಮಳೆಯಾಗಿದೆ. ಹೀಗಾಗಿಯೂ, ವಿದ್ಯುತ್ ದರ ಹೆಚ್ಚಳ ಮಾಡಿರುವುದು ಸರಿಯಲ್ಲ. ಈ ದರ ಹೆಚ್ಚಳನ್ನು ಕೂಡಲೇ ಹಿಂಪಡೆಯಬೇಕು. ಒಂದೂವರೆ ವರ್ಷಗಳ ಕಾಲ ದರ ಏರಿಕೆ ಮಾಡಬಾರದು ಎಂದಿದ್ದಾರೆ.

ಸರ್ಕಾರದಿಂದ ಯಾರಿಗೂ ಸೂಕ್ತ ನೆರವು ದೊರೆಯಲಿಲ್ಲ

ಇಡೀ ದೇಶ ಕೊರೊನಾದಿಂದ ನರಳುತ್ತಿದೆ. ಮಾನವೀಯ ಕಾರಣಕ್ಕೆ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದ್ದೇವೆ. ದೇಶದ ಎಲ್ಲಾ ವರ್ಗದ ಜನರೂ ಲಾಕ್ ಡೌನ್ ಗೆ ಸಹಕಾರ ನೀಡಿದರು. ಆದರೆ, ರೈತರು, ಕಾರ್ಮಿಕರು, ವ್ಯಾಪಾರಿಗಳು, ಉದ್ಯೋಗಿಗಳು, ಉದ್ಯೋಗದಾತರು ಯಾರೂ ನೆಮ್ಮದಿಯಿಂದ ಇಲ್ಲ. ಸರ್ಕಾರದಿಂದ ಯಾರಿಗೂ ಸೂಕ್ತ ನೆರವು ದೊರೆಯಲಿಲ್ಲ ಎಂದು ಟ್ವಿಟರ್ ನಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ. Electricity,price,hike,anti,people,decision,KPCC,President,D.K.Shivakumar

key words : Electricity-price-hike-anti-people-decision-KPCC- President-D.K.Shivakumar