ಶಬ್ದ ರಹಿತ ದೀಪಾವಳಿಯಂತೆ ‘ನಾಯ್ಸ್ ಲೆಸ್ ಫ್ರೈಡೆ, ಬ್ಲೆಡ್ ಲೆಸ್ ಬಕ್ರಿದ್’ ಆಚರಿಸಲಿ –ಪಟಾಕಿ ನಿಷೇಧಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ ..

ವಿಜಯಪುರ,ನವೆಂಬರ್,9,2020(www.justkannada.in): ರಾಜ್ಯದಲ್ಲಿ ಕೊರೋನಾ ಹಿನ್ನೆಲೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದು ಮತ್ತು ಮಾರುವುದನ್ನ ಸರ್ಕಾರ ನಿಷೇಧಿಸಿದ್ದು ಇದಕ್ಕೆ ಆಡಳಿತ ಪಕ್ಷ  ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.celebrate-noiseless-friday-bloodless-bakrid-mla-basanagouda-patil-yatnal

ಹೌದು, ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್,  ದೀಪಾವಳಿ ಹಬ್ಬದ ವೇಳೆ ಪಟಾಕಿ ನಿಷೇಧಕ್ಕೆ ಆಕ್ಷೇಪ ವ್ಯಕ್ತಪಡಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.  ಈ ಕುರಿತು ಫೇಸ್‌ಬುಕ್‌ ನಲ್ಲಿ ಪೋಸ್ಟ್ ಹಾಕಿರುವ ಯತ್ನಾಳ್, ಹಿಂದೂಗಳು ದೀಪಾವಳಿ, ದಸರಾ, ಗಣೇಶ ಹಬ್ಬಗಳಂದು ಸಾಮೂಹಿಕವಾಗಿ ಸೇರುತ್ತಾರೆ. ಹೀಗೆ ಸೇರುವುದೇ ವರ್ಷಕ್ಕೊಮ್ಮೆ.  ಗಣೇಶ ಹಬ್ಬ ಬಂದರೇ ಇಕೋ ಪ್ರೆಂಡ್ಲಿ ಗಣೇಶ ಹಬ್ಬ, ದೀಪಾವಳಿ ಹಬ್ಬ ಬಂದರೇ ನಾಯ್ಜ್ ಲೆಸ್ ದೀಪಾವಳಿ ಮಾಡಿ ಅಂತ ಬೋಧನೆ ಮಾಡುತ್ತಾರೆ.celebrate-noiseless-friday-bloodless-bakrid-mla-basanagouda-patil-yatnal

ಇನ್ನು ಮುಂದೇ ಇಕೋ ಪ್ರೆಂಡ್ಲಿ ಗಣೇಶ ಹಬ್ಬ,  ನಾಯ್ಜ್ ಲೆಸ್ ದೀಪಾವಳಿ ಹಬ್ಬದ ಜೊತೆಗೆ ನಾಯ್ಜ್ ಲೆಸ್ ಫ್ರೈಡೆ, ಬ್ಲೆಡ್ ಲೆಸ್ ಬಕ್ರಿದ್, ಕ್ರ್ಯಾಕರ್ ಲೆಸ್ 31st  ಡಿಸೆಂಬರ್ ನೈಟ್ ಇವೆಲ್ಲವೂ ಗಳನ್ನು ಆಚರಿಸೋಣ. ಬಕ್ರಿದ್ ನಲ್ಲಿ ರಕ್ತ ಹರಿಸುವುದು ಬೇಡ. ಡಿಸೆಂಬರ್ 31 ರಂದು ಪಟಾಕಿ ಸಿಡಿಸುವುದು ಬೇಡ. ಧ್ವನಿವರ್ಧಕ ಬಳಸಿ ಕೂಗುವುದು, ರಸ್ತೆಯಲ್ಲಿ ನಮಾಜ್ ಮಾಡುವುದು ಬೇಡ. ನಾವು ಮನೆಯಲ್ಲೇ ದೀಪ ಹಚ್ಚುತ್ತೇವೆ. ಅವರು ಸ್ಪೀಕರ್ ಹಚ್ಚದೇ ನಮಾಜ್ ಮಾಡಲಿ ಎಂದು ಫೇಸ್ ಬುಕ್ ಪೇಜ್ ನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬರೆದುಕೊಂಡಿದ್ದಾರೆ.

Key words: celebrate -Noiseless Friday= Bloodless –Bakrid-MLA-Basanagouda Patil Yatnal