ಇಂದಿನಿಂದ ವಿದ್ಯುತ್ ದರ ಏರಿಕೆ: ಹೋಟೆಲ್ ಮಾಲೀಕರ ಸಂಘದಿಂದ ವಿರೋಧ.

ಬೆಂಗಳೂರು,ಅಕ್ಟೋಬರ್,1,2022(www.justkannada.in):  ವಿದ್ಯುತ್ ದರ ಏರಿಕೆಗೆ ಸರ್ಕಾರ ನಿರ್ಧಾರ ಮಾಡಿದ್ದು, ಪ್ರತಿ ಯೂನಿಟ್ ​ಗೆ 43 ಪೈಸೆ ಹೆಚ್ಚಳವಾಗಲಿದೆ. ಇಂದಿನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

ಈ ನಡುವೆ ವಿದ್ಯುತ್ ದರ ಏರಿಕೆ ಮಾಡಿರುವ ಸರ್ಕಾರದ ವಿರುದ್ಧ ಹೋಟೆಲ್ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಅ.1ರಿಂದ ಪರಿಷ್ಕೃತ ವಿದ್ಯುತ್ ದರ ಜಾರಿಗೆ ಬರುತ್ತಿದೆ. ದರ ಏರಿಕೆ ನಿರ್ಧಾರವನ್ನ  ಮುಂದಿನ ವರ್ಷ ಏಪ್ರಿಲ್ ​ವರೆಗೆ ಮುಂದೂಡುವಂತೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ಆಗ್ರಹಿಸಿದೆ.

ಈ ಹಿಂದೆಯೂ ಎರಡು ಬಾರಿ ವಿದ್ಯುತ್ ದರ ಏರಿಸಲಾಗಿದೆ,  ಈಗ ಮತ್ತೆ ದರ ಏರಿಕೆ ಮಾಡುತ್ತಿರುವುದು  ಬಹುದೊಡ್ಡ ಅನ್ಯಾಯ. ದರ ಏರಿಕೆಯಿಂದ ಶೇ.10 ರಷ್ಟು ವಿದ್ಯುತ್ ಬಿಲ್ ಹೆಚ್ಚಾಗುತ್ತೆ.  ಜೊತೆಗೆ ಶೇ. 9 ರಷ್ಟ ತೆರಿಗೆ ಹಾಕಲಾಗಿದೆ . ಇದು ಸರಿಯಲ್ಲ. ಸರ್ಕಾರದ ಶೇ.9ರಷ್ಟಿರುವ ತೆರಿಗೆಯನ್ನ ಶೇ 4ಕ್ಕೆ ಇಳಿಸಬೇಕು.  ಇಂದಿನಿಂದ ಜಾರಿಯಾದ ಹೊಸ ದರ ಏರಿಕೆಯನ್ನ ಮುಂದಿನ ಏಪ್ರಿಲ್ ವರೆಗೂ ತಡೆಹಿಡಿಯಿರಿ ಎಂದು ಹೋಟೆಲ್ ಮಾಲೀಕರ ಸಂಘ ಒತ್ತಾಯಿಸಿದೆ.

Key words: Electricity- price- hike-Opposition – Hotel Owners Association