ಮೈಸೂರು ಕೇಂದ್ರ ಕಾರಾಗೃಹಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ: ಸಜಾ ಬಂಧಿ ಕೈದಿಗಳಿಂದ ಮನವಿ ಸ್ವೀಕಾರ.

ಮೈಸೂರು, ಅಕ್ಟೋಬರ್ 1,2022(www.justkannada.in): ಮೈಸೂರು ಜಿಲ್ಲಾ ಪ್ರವಾಸ ದಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ  ಅವರು ಇಂದು, ಮೈಸೂರು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದರು.

ಭೇಟಿ ಸಮಯದಲ್ಲಿ, ಕಾರಾಗೃಹದ ಸಿಬ್ಬಂದಿಗಳೇ ನಿರ್ವಹಿಸುವ, ಕಾರಾಗೃಹದ ಎಫ್ ಎಂ ಬಾನುಲಿ ಕೇಂದ್ರವನ್ನು ವೀಕ್ಷಿಸಿದರು. ಹಾಗೂ ಬಾನುಲಿ ಪ್ರಸಾರ ಕೇಂದ್ರದ ಮೂಲಕ, ಕಾರಾಗೃಹ ವಾ ಉದ್ದೇಶಿಸಿ ಮಾತನಾಡಿದರು.

ಸರಕಾರದಿಂದ ಬಂಧಿ ಕೈದಿಗಳ ಪುನರ್ವಸತಿ, ಹೆಚ್ಚಿಸಿರುವ ಕೂಲಿ ದರ, ಹಾಗೂ ಕಾರಾಗೃಹ ಅಭಿವೃದ್ದಿ ಮಂಡಳಿ ಅಸ್ತಿತ್ವಕ್ಕೆ ತಂದಿರುವ ಬಗ್ಗೆ, ಬಂಧಿಗಳ ಗಮನ ಸೆಳೆದರು.

ಕಾರಾಗೃಹ ವನ್ನು ಸುಧಾರಣೆಯ ಹಾಗೂ ಮನ ಪರಿವರ್ತನೆಯ ತಾಣ ವೆಂದು, ಸ್ವೀಕರಿಸಿ, ಹಾಗೂ ಇಲ್ಲಿನ ಹೊರತಾಗಿಯೂ ಬದುಕು ಇದೆ ಎಂಬ ವಾಸ್ತವವನ್ನು ಅರಿತು ಕೊಳ್ಳಿ ಎಂದು, ಹೇಳಿದ ಸಚಿವ ಅರಗ ಜ್ಞಾನೇಂದ್ರ ಎಲ್ಲರಿಗೂ ಶುಭ ಹಾರೈಸಿದರು.

ಕಾರಾಗೃಹ ದಲ್ಲಿರುವ, ಕೈ ಮಗ್ಗ ಘಟಕ, ಕೌಶಲ್ಯ ಅಭಿವೃದ್ದಿ ಕೇಂದ್ರ, ಹೊಲಿಗೆ ತರಭೇತಿ ಘಟಕಕ್ಕೂ ಭೇಟಿ ನೀಡಿದ ಸಚಿವ ಅರಗ ಜ್ಞಾನೇಂದ್ರ, ಸಜಾ ಬಂಧಿ ಕೈದಿಗಳ ಜತೆ, ಸಂಭಾಷಿಸಿದರು. ಕಾರಾಗೃಹದ ಒಳಗಿರುವ, ಕೈದಿಗಳ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿದ ಸಚಿವರನ್ನು, ಕೈದಿಗಳು, ಸುಶ್ರಾವ್ಯ ವಾಗಿ ಹಾಡುವುದರ ಮೂಲಕ ಬರ ಮಾಡಿಕೊಂಡರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ, ಕೇಂದ್ರ ಕಾರಾಗೃಹದ ಘಟಕವನ್ನು ವೀಕ್ಷಿಸಿದರು. ಸಜಾ ಬಂಧಿ ಕೈದಿಗಳಿಂದ ಸಚಿವರು  ಮನವಿ ಸ್ವೀಕರಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಮಹಿಳಾ ಸಜಾಬಂಧಿಗಳನ್ನು ಸಹ ಸಚಿವ ಅರಗ ಜ್ಞಾನೇಂದ್ರ ಭೇಟಿ ಮಾಡಿ, ಅವರ ಅಹವಾಲುಗಳನ್ನು ಸ್ವೀಕರಿಸಿದರು. ಕಾರಾಗೃಹದ ಅಡುಗೆ ವಿಭಾಗಕ್ಕೆ ಭೇಟಿ ನೀಡಿದ ಸಚಿವರು, ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು, ಸೂಚಿಸಿದರು.

ನಂತರ ಜೈಲು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ಅರಗ ಜ್ಞಾನೇಂದ್ರ, ಜೈಲಿನ ಒಳಗಡೆ, ಮಾದಕ ವಸ್ತುಗಳು, ಮೊಬೈಲ್ ಫೋನ್ ಬಳಕೆ ವಿರುದ್ಧ ತೀವ್ರ ನಿಗಾ ವಹಿಸಬೇಕು ಎಂದು, ನಿರ್ದೇಶನ ನೀಡಿದರು.

ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಕೆ.ಸಿ ದಿವ್ಯಶ್ರೀ ಸೇರಿದಂತೆ, ಹಿರಿಯ ಅಧಿಕಾರಿಗಳೂ ಉಪಸ್ತಿತರಿದ್ದರು.

Key words: Home Minister-Araga Jnanendra- visits- Mysore- Central Jail.

ENGLISH SUMMARY…

Home Minister Araga Jnanendra visits Mysuru Central Prison: Receives appeals from prisoners
Mysuru, October 1, 2022 (www.justkannada.in): Home Minister Araga Jnanendra today visited the Mysuru Central Prison.
He inspected the FM radio center maintained by the prison authorities, where prisoners themselves are the workers. He gave a speech on the FM radio about its activities. He explained the measures taken by the government concerning the rehabilitation of the prisoners, increased wages, and the establishment of the Prison Development Board.
He also visited the handicrafts unit, skill development center, and tailoring training center on the jail premises and also interacted with several prisoners. Later he visited the prayer hall, where he was welcomed by a few prisoners with songs.
The Home Minister received grievances from the women prisoners. He also visited the kitchen and checked the cleanliness.
Later he asked the prison officials to monitor and prevent the usage of narcotics, mobile phones, etc., inside the prison premises.
Mysuru Jail Superintendent K.C. Divyashri and other senior officials were present.
Keywords: Mysuru Jail/ Prison/ Home Minister/ visit