ಈ ಎರಡು ಕ್ಷೇತ್ರಗಳು ನನ್ನ ಕಣ್ಣುಗಳಿದ್ಧಂತೆ: ಈ ಬಾರಿ ಒಂದೇ ಕಡೆ ಸ್ಪರ್ಧೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

Promotion

ರಾಮನಗರ,ಅಕ್ಟೋಬರ್,22,2022(www.justkannada.in):  ರಾಮನಗರ ಮತ್ತು ಚೆನ್ನಪಟ್ಟಣ ನನ್ನ ಎರಡು ಕಣ್ಣುಗಳಿದ್ಧಂತೆ ಈ ಬಾರಿ ಒಂದೇ ಕಡೆ ಅಂದರೇ ಚನ್ನಪಟ್ಟಣ ಕ್ಷೇತ್ರದಿಂದ  ಮಾತ್ರ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಕಳೆದ ಬಾರಿ ಒತ್ತಡಕ್ಕೆ ಮಣಿದು ಎರಡು ಕಡೆ ಸ್ಪರ್ಧಿಸಿದ್ದೆ.  ಈ ಬಾರಿ ಒಂದೇ ಕಡೆ ಸ್ಪರ್ಧಿಸುತ್ತೇನೆ. ನಾನು ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಗೊಂದಲ ಇಲ್ಲ. ಮಾಗಡಿಯಿಂದಲೂ ಸ್ಪರ್ಧಿಸುವಂತೆ ಒತ್ತಡ ಹೇರಿದ್ರು.  ಆದರೇ ಈಗಾಗಲೇ ಸ್ಪಷ್ಟ ತೀರ್ಮಾನ ಮಾಡಿದ್ದೇವೆ ಎಂದರು.

ಇಡೀ ದೇಶದಲ್ಲಿ, ನಾಮಪತ್ರ ಸಲ್ಲಿಸಿ ಅಭ್ಯರ್ಥಿ ಪ್ರಚಾರಕ್ಕೆ ಬರದೇ ಇದ್ದರೂ, ಕಾರ್ಯಕರ್ತರೆ ಅಭ್ಯರ್ಥಿಯನ್ನು ಗೆಲ್ಲಿಸುವ ಕ್ಷೇತ್ರ ಇದ್ದರೆ ಅದು ಚನ್ನಪಟ್ಟಣ‌ ಕ್ಷೇತ್ರ. ನಾನು ಯಾವುದೇ ಕಾರಣಕ್ಕೂ ಕ್ಷೇತ್ರ ಬಿಡಲ್ಲ ಎಂದರು.

ಹಾಗೆಯೇ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಗೆ ಪರೋಕ್ಷ ಟಾಂಗ್ ನೀಡಿದ ಹೆಚ್.ಡಿ ಕುಮಾರಸ್ವಾಮಿ, ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಈಗಾಗಲೇ ಹಣದ ಹೊಳೆ ಹರಿಯುತ್ತಿದೆ. ಹಣವನ್ನ ಕೊಟ್ಟು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸೆಳೆಯುವ ಕೆಲಸ ನಡೆಯುತ್ತಿದೆ. ಇದಕ್ಕೆಲ್ಲ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಸೊಪ್ಪು ಹಾಕಬೇಡಿ ಎಂದರು.

Key words: Election- ramanagar-channapatna- Former CM -HD Kumaraswamy.