ಇಂದು ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ….

Promotion

ಮೈಸೂರು,ಮಾರ್ಚ್,30,2021(www.justkannada.in): ಇಂದು ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಮೈಮುಲ್‌ ಚುಕ್ಕಾಣಿ ಹಿಡಿಯಲು ನಿರ್ದೇಶಕರು ಕಸರತ್ತು ನಡೆಸುತ್ತಿದ್ದಾರೆ.Government,Social,Economic,Educational,survey,Report,Should,receive,Former CM,Siddaramaiah 

ಮೈಮುಲ್ ಅಧ್ಯಕ್ಷ  ಸ್ಥಾನಕ್ಕೆ ಚುನಾವಣೆ ಹಿನ್ನೆಲೆ ಬೆಳಿಗ್ಗೆ 10ರಿಂದ 12 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಮಧ್ಯಾಹ್ನ 2 ಗಂಟೆಗೆ ಅಂತಿಮ ಪಟ್ಟಿ ಪ್ರಕಟವಾಗಲಿದೆ. ನಂತರ 2.30ಕ್ಕೆ ಚುನಾವಣೆ ನಡೆಯಲಿದ್ದು ಬಳಿಕ ಫಲಿತಾಂಶ ಪ್ರಕಟವಾಗಲಿದೆ. ಅಧ್ಯಕ್ಷರ ಆಯ್ಕೆಗೆ ಶಾಸಕ ಜಿ.ಟಿ.ದೇವೇಗೌಡರ ನಿರ್ಧಾರವೇ ಅಂತಿಮವಾಗಿದ್ದು, ಜಿಟಿ ದೇವೇಗೌಡರ ಬಣದಲ್ಲಿ 12 ನಿರ್ದೇಶಕರಿದ್ದಾರೆ.

ಜಿಟಿಡಿ ಟೀಮ್ ಕುಶಾಲನಗರ ಸಮೀಪದ ರೆಸಾರ್ಟ್‌ ವೊಂದರಲ್ಲಿ ವಾಸ್ತವ್ಯ ಹೂಡಿ ಒಗ್ಗಟ್ಟಾಗಿದ್ದಾರೆ. ಇನ್ನು ಶಾಸಕ ಜಿ.ಟಿ ದೇವೇಗೌಡರು ಸಹಕಾರ ಮಹಾಮಂಡಲದಲ್ಲೂ ತಮ್ಮ ಬಣ ಗೆಲ್ಲಿಸಿ ಕೊಂಡಿದ್ದಾರೆ. ಈಗಾಗಲೇ ತಮ್ಮ ನಿರ್ದೇಶಕರ ಜೊತೆ ಸಭೆ ನಡೆಸಿರುವ ಜಿಟಿಡಿ. ಶಾಸಕ ಕೆ.ಮಹದೇವ್‌ ಜೊತೆ ಚರ್ಚೆ ನಡೆಸಿ ಅಭ್ಯರ್ಥಿ ಘೋಷಿಸಲಿದ್ದಾರೆ.

ಇನ್ನು ಮೈಮುಲ್ ಅಧ್ಯಕ್ಷಗಾದಿಗೆ ಶಾಸಕ ಮಹದೇವು ಪುತ್ರ ಪ್ರಸನ್ನ ಪೈಪೋಟಿಯಲ್ಲಿದ್ದಾರೆ. ಹೀಗಾಗಿ ಶಾಸಕ ಕೆ. ಮಹದೇವು ಅವರು ನಿರ್ದೇಶಕರ ಮನವೊಲಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಪಿ.ಎಂ.ಪ್ರಸನ್ನ2ನೇ ಬಾರಿಗೆ ನಿರ್ದೇಶಕನಾಗಿ ಆಯ್ಕೆಯಾಗಿದ್ದಾರೆ.Election - President -Vice-President – MYMUL-today.

ಈ ನಡುವೆ ತಲಾ ನಾಲ್ಕು ಬಾರಿ ನಿರ್ದೇಶಕರಾಗಿರುವ ಹುಣಸೂರಿನ ಕೆ.ಎಸ್‌.ಕುಮಾರ್‌, ಎಚ್‌.ಡಿ.ಕೋಟೆಯ ಕೆ.ಈರೇಗೌಡ, ಸಿಎಂ ಬಿಎಸ್ ವೈ ಸಹೋದರಿ ಪುತ್ರ, ಮೈಮುಲ್‌ ನ ನಾಮನಿರ್ದೇಶಿತ ಸದಸ್ಯ ಎಸ್‌.ಸಿ.ಅಶೋಕ್‌ ನಡುವೆ ಪೈಪೋಟಿ ‌ ಉಂಟಾಗಿದೆ. ಒಟ್ಟು 20 ಮತಗಳಿದ್ದು, ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಬಣದ ಕಡೆ ಬಹುಮತವಿದೆ.

Key words: Election – President -Vice-President – MYMUL-today.