ಚುನಾವಣೆ ನೀತಿ ಸಂಹಿತೆ ಜಾರಿ ಎಫೆಕ್ಟ್: ಸರ್ಕಾರಿ ಕಾರು ಬಿಟ್ಟು ಖಾಸಗಿ ವಾಹನದಲ್ಲಿ ತೆರಳಿದ ಸಚಿವರು.

ಬೆಂಗಳೂರು,ಮಾರ್ಚ್,29,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಇಂದಿನಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರು ಸರ್ಕಾರಿ ಕಾರನ್ನ ಬಿಟ್ಟು ತಮ್ಮ ಖಾಸಗಿ ವಾಹನದಲ್ಲೇ ತೆರಳಿದ್ದಾರೆ.

ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೆ ಸಚಿವ ಎಂಟಿಬಿ ನಾಗರಾಜ್ ಸರ್ಕಾರಿ ಕಾರನ್ನ ಬಿಟ್ಟು ತಮ್ಮ ಖಾಸಗಿ ವಾಹನದಲ್ಲೇ ತೆರಳಿದರು. ಹೊಸಕೋಟೆ ತಾಲ್ಲೂಕಿನ ನಂದಗುಡಿ ಸಿಸಿರಸ್ತೆಕಾಮಗಾರಿಗಳನ್ನ ಮೊಟಕುಗೊಳಿಸಿ ಖಾಸಗಿ ವಾಹನದಲ್ಲಿ ತೆರಳಿದರು.

ಇನ್ನು ಸಚಿವರಾದ ವಿ. ಸೋಮಣ್ಣ ಮತ್ತು  ಮುನಿರತ್ನ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ  ಸರ್ಕಾರಿ ಕಾರನ್ನ ಬಿಟ್ಟು ಖಾಸಗಿ ವಾಹನದಲ್ಲಿ ಆಗಮಿಸಿದರು.  ಈ ನಡುವೆ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸಂಸದ ಬಿವೈ ರಾಘವೇಂದ್ರ ಮತ್ತು ಎಂಎಲ್ ಸಿ ರುದ್ರೇಗೌಡ  ಸಹ ತಮ್ಮ ಖಾಸಗಿ ವಾಹನದಲ್ಲಿ ತೆರಳಿದರು.

Key words:  Election -Code of Conduct- Ministers -left -government car