ರಾಜ್ಯ ವಿಧಾನಸಭಾ ಎಲೆಕ್ಷನ್ : ಚುನಾವಣಾ ಕೆಲಸಕ್ಕೆ 2400 ವೀಕ್ಷಕರ ನೇಮಕ: ಅಕ್ರಮ ತಡೆಗೆ ತಂಡ ರಚನೆ.

ನವದೆಹಲಿ,ಮಾರ್ಚ್,29,2023(www.justkannada.in):  ಬಹು ನಿರೀಕ್ಷಿತ ರಾಜ್ಯವಿಧಾನಸಭಾ ಚುನಾವಣೆಗೆ ಕೇಂಧ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು ಮೇ 10 ರಂದು ಮತದಾನ ನಡೆದು ಮೇ 13ರಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಹಾಗೆಯೇ ರಾಜ್ಯದ ವಿಧಾನಸಭಾ ಚುನಾವಣೆ ವೇಳೆ ನಡೆಯುವ ಅಕ್ರಮ ತಡೆಯಲು ಕೇಂದ್ರ ಚುನಾವಣಾ ಆಯೋಗ ತಂಡವನ್ನ ರಚಿಸಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಕೆಲಸಕ್ಕೆ 2400 ವೀಕ್ಷಕರನ್ನ  ನೇಮಕ ಮಾಡಲಾಗಿದೆ. ಚುನಾವಣಾ ಅಕ್ರಮ ತಡೆಯಲು ತಂಡ ರಚನೆ ಮಾಡಲಾಗಿದೆ.

2016 ಫ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದೆ .  19 ಜಿಲ್ಲೆಗಳಲ್ಲಿ  171 ಚೆಕ್ ಪೋಸ್ಟ್ ಗಳನ್ನ ನಿರ್ಮಾಣ ಮಾಡಲಾಗಿದ್ದು,  ವಿಮಾನ ನಿಲ್ದಾಣ ಹೆದ್ದಾರಿಗಳಲ್ಲಿ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ.  ಬ್ಯಾಂಕ್ ವ್ಯವಹಾರದ ಮೇಲೂ  ಹದ್ದಿನ ಕಣ್ಣಿಡಲಾಗಿದೆ ಎಂದು ತಿಳಿಸಿದ್ದಾರೆ.

Key words: State- Assembly- Election- 2400 -observers – election work