ಮೊಟ್ಟೆ ಎಸೆತ ಪ್ರಕರಣ: ಮೊಟ್ಟೆ ಎಸೆತ ಪ್ರಕರಣ: ಸಿಎಂ ಭರವಸೆ ನಡುವೆ ಪ್ರತಿಭಟನೆ ಸರಿಯಲ್ಲ ಎಂದ ಸಚಿವ ಸೋಮಶೇಖರ್

Promotion

ಮೈಸೂರು, ಆಗಸ್ಟ್ 21, 2022 (www.justkannada.in): ಮೈಸೂರಿನಲ್ಲಿ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್‌ಗೆ ಕಪ್ಪು ಬಾವುಟ ಪ್ರದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರು ಪ್ರತಿಕ್ರಿಯಿ ನೀಡಿದ್ದಾರೆ. ನನಗೆ ಯಾರು ಕಪ್ಪು ಬಾವುಟ ಪ್ರದರ್ಶಿಸಿಲ್ಲ ಎಂದಿದ್ದಾರೆ.

ನಿನ್ನೆ ಯಾರೂ ಪ್ರತಿಭಟನೆ ಮಾಡಿಲ್ಲ. ಇದು ನನಗೆ ಗೊತ್ತು ಇಲ್ಲ. ನಾನು ಡಿ. ದೇವರಾಜು ಅರಸು ಜನ್ಮದಿನ ಕಾರ್ಯಕ್ರಮ ಮುಗಿಸಿ ಹೊರಟೆ. ಆಮೇಲೆ ಮಾಧ್ಯಮದಲ್ಲಿ ನೋಡಿದೆ ಅಷ್ಟೇ ಎಂದು ಇಂದು ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

ಕೊಡಗಿನಲ್ಲಿ ಸಿದ್ದರಾಮಯ್ಯರ ಕಾರಿಗೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಘಟನೆ ಬಗ್ಗೆ ಹೇಳಿದ್ದಾರೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ತೇವೆ ಅಂದಿದ್ದಾರೆ. ವಿರೋಧ ಪಕ್ಷದ ನಾಯರಿಗೆ ಸೂಕ್ತವಾದ ಭದ್ರತೆ ಒದಗಿಸುವುದನ್ನು ಸಿಎಂ ಹೇಳಿದ್ದಾರೆ. ಇಷ್ಟೆಲ್ಲಾ ಹೇಳಿದ್ರು, ಪ್ರತಿಭಟನೆ ಮಾಡ್ತಿದ್ದಾರೆ, ಇದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಮೊಟ್ಟೆ ಹೊಡೆದವನ ಮೇಲೂ ಕ್ರಮ ತಗೊಳ್ಳಲಾಗಿದೆ. ಮೊಟ್ಟೆ ಹೊಡೆದವನೇ ಹೇಳಿದ್ದಾನೆ ನಾನು ಕಾಂಗ್ರೆಸ್ ಅಂತಾ. ಜೊತೆಗೆ ಮೊಟ್ಟೆ ಹೊಡೆದ ಕಾರಣವನ್ನೂ ಕೊಟ್ಟಿದ್ದಾನೆ. ಅವನು ನಮ್ಮ ಪಕ್ಷದವನಲ್ಲ. ನಮ್ಮ ಶಾಸಕರ ಜೊತೆ ಸಾಮಾನ್ಯವಾಗಿ ಸೆಲ್ಫಿ ಜನ ತಗೊತಾರೆ. ಅದೇ ರೀತಿ ಅವನು ಫೋಟೋ ತಗೊಂಡಿದ್ದಾನೆ ಅಷ್ಟೇ ಎಂದು ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

ಆಗಸ್ಟ್ 26ಕ್ಕೆ ಕಾಂಗ್ರೆಸ್ ಮಡಿಕೇರಿ ಚಲೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಯಾರು ಬೇಕಾದ್ರು ಪ್ರತಿಭಟನೆ ಮಾಡಬಹುದು. ಅದು ಅವರಿಗೆ ಬಿಟ್ಟದ್ದು. ಕಾಂಗ್ರೆಸ್‌ನ ಮಡಿಕೇರಿ ಚಲೋಗೆ ಪ್ರತಿಯಾಗಿ ಬಿಜೆಪಿ ಜನೋತ್ಸವ ವಿಚಾರ ಕುರಿತು ಇನ್ನೂ ಮಾಹಿತಿ ಇಲ್ಲಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.