ಹಿಂದುತ್ವವೇನು ಬಿಜೆಪಿಯವರ ಅಪ್ಪನ ಆಸ್ತಿಯಾ?: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಬೆಂಗಳೂರು, ಆಗಸ್ಟ್ 21, 2022 (www.justkannada.in): ಹಿಂದುತ್ವವೇನು ಬಿಜೆಪಿಯವರ ಅಪ್ಪನ ಆಸ್ತಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿಂದುತ್ವ ಒಪ್ಪಿಕೊಳ್ಳಲಿ ಎಂಬ ಬಿಜೆಪಿಯ ನಾಯಕರ ಹೇಳಿಕೆಗೆ ಶಿವಕುಮಾರ್, ಹಿಂದುತ್ವವೇನು ಬಿಜೆಪಿಯವರ ಅಪ್ಪನ ಆಸ್ತಿಯಲ್ಲ ಎಂದಿದ್ದಾರೆ.

ನನ್ನ ಹೆಸರು ಶಿವನ ಮಗ ಕುಮಾರ, ವಿರೋಧ ಪಕ್ಷದ ನಾಯಕರಿಗೆ ಸಿದ್ದರಾಮಯ್ಯ ಎಂಬ ಹೆಸರಿದೆ. ನಾವೇನು ಕಲ್ಲು ಅಥವಾ ಮಣ್ಣು ಎಂದು ಹೆಸರಿಟ್ಟುಕೊಂಡಿದ್ದೇವಾ ಎಂದು ಪ್ರಶ್ನಿಸಿದ್ದಾರೆ.

25 ವರ್ಷಗಳ ಹಿಂದೆ ಯುಗಾದಿ ಹಬ್ಬದ ದಿನ ನಾವುಗಳು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಮನೆಗೆ ಹೋಗಿದ್ದೆವು. ಆ ಸಂದರ್ಭದಲ್ಲಿ ಅವರು ತಮ್ಮ ಮನೆಯಲ್ಲಿ ಹಬ್ಬ ಆಚರಣೆ ಮಾಡುತ್ತಿದ್ದರು ಎಂದು ಸ್ಮರಿಸಿದರು.