ರಾಜಕಾರಣವನ್ನ ರಾಜಕಾರಣದ ಮೈದಾನದಲ್ಲೇ ಮಾಡಬೇಕು: ಸರ್ಕಾರಿ ಕಚೇರಿಗಳಲ್ಲಿ ಅಲ್ಲ- ಡಿಕೆ ಶಿವಕುಮಾರ್ ಟಾಂಗ್.

ನವದೆಹಲಿ,ಅಕ್ಟೋಬರ್,7,2022(www.justkannada.in): ರಾಜಕಾರಣವನ್ನ ರಾಜಕಾರಣದ ಮೈದಾನದಲ್ಲೇ ಮಾಡಬೇಕು.  ಸರ್ಕಾರಿ ಕಚೇರಿಗಳಲ್ಲಿ ಅಲ್ಲ ಎಂದು ಇಡಿ ವಿಚಾರಣೆ ಬಳಿಕ ಬಿಜೆಪಿಗೆ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ಪರೋಕ್ಷ ಟಾಂಗ್ ನೀಡಿದರು.

ಇಂದು ವಿಚಾರಣೆಗೆ ಹಾಜರಾಗುವಂತೆ ಡಿ.ಕೆ ಶಿವಕುಮಾರ್ ಮತ್ತು ಡಿ.ಕೆ ಸುರೇಶ್ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 4 ಗಂಟೆಗಳ ಕಾಲ ಇಬ್ಬರು ನಾಯಕರು ಇಡಿ ವಿಚಾರಣೆ ಎದುರಿಸಿದರು.

ಇಡಿ ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್,  ಯಂಗ್ ಇಂಡಿಯಾ ಹಣಕಾಸು ವ್ಯವಹಾರದ ಬಗ್ಗೆ ಇಡಿ ಪ್ರಶ್ನೆ ಮಾಡಿದೆ. ಯಂಗ್ ಇಂಡಿಯಾಗೆ ದೇಣಿಗೆ ನೀಡಿರುವ ಬಗ್ಗೆ ನನ್ನ ವಿಚಾರಣೆ ನಡೆಸಿದೆ.  ನ್ಯಾಷನಲ್ ಹೆರಾಲ್ಡ್ ಬಗ್ಗೆ ಯಾವುದೇ ಪ್ರಶ್ನೆ ಕೇಳಿಲ್ಲ. ಇಡಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದೇನೆ ಎಂದರು.

ರಾಜಕಾಣ ರಾಜಕಾರಣದಲ್ಲೇ ಮಾಡಬೇಕು. ಸರ್ಕಾರಿ ಕಚೇರಿಗಳಲ್ಲಿ ಅಲ್ಲ. ನಾಲ್ಕುಗೋಡೆಗಳ ಮಧ್ಯೆ ಹೀಗೆ ರಾಜಕಾರಣ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: ED-Hearing-  KPCC-president-DK Shivakumar