ರಾಜ್ಯ ಮತ್ತು ದೇಶದ ನಾನಾ ಭಾಗಗಳಲ್ಲಿ ಕಂಕಣ ಸೂರ್ಯಗ್ರಹಣ ಗೋಚರ: ನೋಡಿ ಕಣ್ತುಂಬಿಕೊಂಡ ಜನತೆ…

Promotion

ಬೆಂಗಳೂರು,ಡಿ,26,2019(www.justkannada.in): ಇತಿಹಾಸದಲ್ಲಿಯೇ  ಇಂದು ನಭೋ ಮಂಡಲದಲ್ಲಿ ವಿಸ್ಮಯವೊಂದು ನಡೆದಿದ್ದು, ಕಂಕಣ ಸೂರ್ಯಗ್ರಹಣ ಗೋಚರಿಸಿದೆ.

ದೇಶ ಮತ್ತು ರಾಜ್ಯದ ನಾನಾ ಭಾಗಗಳಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗಿದ್ದು ಕಂಕಣ ಸೂರ್ಯಗ್ರಹಣವನ್ನ ನೋಡಿ ಜನತೆ ಕಣ್ತುಂಬಿಕೊಂಡಿದ್ದಾರೆ. ದೇಶದಲ್ಲಿ ಇಂದು ಬೆಳಗ್ಗೆ 8.04ಕ್ಕೆ ಕಂಕಣ ಸೂರ್ಯಗ್ರಹಣ ಗೋಚರಗೊಂಡಿದೆ. ಸೂರ್ಯ-ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಈ ಸೂರ್ಯಗ್ರಹಣ ಸಂಭವಿಸುತ್ತದೆ.

ಕೊಚ್ಚಿ, ಕಾಸರಗೂಡು, ಅಹಮದಾಬಾದ್. ಭುವನೇಶ್ವರ್, ಮುಂಬೈ, ವಾರಣಾಸಿ  ಚಂಢಿಗಡ, ಹರಿದ್ವಾರ ಸೇರಿ ದೇಶದ ಹಲವು ಕಡೆಗಳಲ್ಲಿ ಕಂಕಣ ಸೂರ್ಯಗ್ರಹಣ ಗೋಚರಿಸಿದೆ. ಹಾಗೆಯೇ ರಾಜ್ಯದ ವಿವಿಧ ನಗರಗಳಲ್ಲಿ, ಮೈಸೂರು, ಬೆಳಗಾವಿ, ಶಿವಮೊಗ್ಗ, ಮಂಗಳೂರು, , ಚಾಮರಾಜನಗರ, ಹುಬ್ಬಳ್ಳಿ, ಬಾಗಲಕೋಟೆ, ರಾಮನಗರ, ಧಾರವಾಡ ಮುಂತಾದ ನಗರಗಳಲ್ಲಿ ಈ ಸೂರ್ಯಗ್ರಹಣ ಗೋಚರವಾಗಿದೆ.  ಸೂರ್ಯ ಗ್ರಹ ವೀಕ್ಷಣೆಗೆ ಹಲವೆಡೆ ಟೆಲಿಸ್ಕೋಪ್, ಬೈನಾಕ್ಯುಲರ್, ಬಿಂಬ ರಂಧ್ರ ದರ್ಶನ ಹಾಗೂ ಸೌರ ಕನ್ನಡಕಗಳ ವ್ಯವಸ್ಥೆ ಮಾಡಲಾಗಿತ್ತು.

Key words: eclipse- visible –country- state – See – people.